ವಿಶ್ವವಿಖ್ಯಾತ ತಾಜ್‍ಮಹಲ್ ಮೇಲೆ ಐಸಿಸ್ ಉಗ್ರರ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

ISIS-Taj-Mahal

ನವದೆಹಲಿ, ಮಾ.17-ಆಗ್ರಾದಲ್ಲಿರುವ ವಿಶ್ವವಿಖ್ಯಾತ ಪ್ರೇಮಸೌಧ ಖ್ಯಾತಿಯ ತಾಜ್‍ಮಹಲ್ ಮೇಲೆ ಐಸಿಸ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಸೈಟ್ ಇಂಟೆಲಿಜೆನ್ಸ್ ಗ್ರೂಪ್ ಎಚ್ಚರಿಕೆ ನೀಡಿದೆ.  ಐಸಿಸ್ ಜೊತೆ ಗುರುತಿಸಿಕೊಂಡಿರುವ ಅಹ್ವಾಲ್ ಉಮ್ಮತ್ ಮೀಡಿಯಾ ಸೆಂಟರ್ ಎಂಬ ಉಗ್ರ ಸಂಘಟನೆ ಟೆಲಿಗ್ರಾಂ ಆ್ಯಪ್‍ನಲ್ಲಿ ಗ್ರಾಫಿಕ್ಸ್ ಸಂದೇಶ ಪೋಸ್ಟ್ ಮಾಡಿದೆ. ಗ್ರಾಫಿಕ್ಸ್‍ನಲ್ಲಿ ತಾಜ್‍ಮಹಲ್ ಅನ್ನು ಹೋಲುವ ಕಟ್ಟಡ ಇರುವುದು ಹಾಗು ವ್ಯಕ್ತಿಯೊಬ್ಬ ರಾಕೆಟ್ ಲಾಂಚರ್ ಹಿಡಿದು ನಿಂತಿದ್ದು, ಅದರಲ್ಲಿ ನ್ಯೂ ಟಾರ್ಗೆಟ್ ಎಂದು ಬರೆಯಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ತಾಜ್‍ಮಹಲ್ ಹೋಲುವ ಗ್ರಾಫಿಕ್ಸ್ ಸಂದೇಶ ಕಳೆದ ಮಾ.14 ರಂದೇ ಟೆಲಿಗ್ರಾಂ ಆ್ಯಪ್‍ನಲ್ಲಿ ಬಂದಿರುವುದರಿಂದ ಆಗ್ರಾ ತಾಜ್‍ಮಹಲ್ ಮೇಲೆ ದಾಳಿ ನಡೆಯಬಹುದೆಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆ ಪ್ರೇಮಸೌಧ ತಾಜ್‍ಮಹಲ್‍ಗೆ ಬಿಗಿಭದ್ರತೆ ಒದಗಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin