ಅಘೋಷಿತ ನಗದು ಮೇಲೆ ವಿಧಿಸಲಾದ ತೆರಿಗೆಯಿಂದ ಸರ್ಕಾರಕ್ಕೆ 6,000 ಕೋಟಿ ರೂ. ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Banned--01

ನವದೆಹಲಿ, ಮಾ.18- ನೋಟು ರದ್ದತಿ ನಂತರ ಕೇಂದ್ರ ಸರ್ಕಾರಕ್ಕೆ ಈವರೆಗೆ ಅಘೋಷಿತ ನಗದು ಮೇಲೆ ವಿಧಿಸಲಾದ ತೆರಿಗೆಯಿಂದ 6,000 ಕೋಟಿ ರೂ.ಗಳಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಕಾಳ ಧನ ಕುರಿತ ವಿಶೇಷ ತನಿಖಾ ತಂಡದ (ಎಸ್‍ಐಟಿ) ಉಪಾಧ್ಯಕ್ಷ ಅರಿಜಿತ್ ಪಸಾಯತ್ ತಿಳಿಸಿದ್ದಾರೆ.
500 ರೂ. ಮತ್ತು 1,000 ರೂ.ಗಳ ನೋಟು ಅಮಾನ್ಯದ ನಂತರ ತಮ್ಮ ಖಾತೆಯಲ್ಲಿ ಅಥವಾ ಅನ್ಯರ ಖಾತೆಯಲ್ಲಿ ಇಲ್ಲವೇ ಬೇನಾಮಿ ಹೆಸರಿನಲ್ಲಿ ಭಾರೀ ಮೊತ್ತದ ಹಣವನ್ನು ಠೇವಣಿ ಇಟ್ಟಿರುವ ಗ್ರಾಹಕರು ಮತ್ತು ವ್ಯಕ್ತಿಗಳಿಂದ ಆದಾಯ ತೆರಿಗೆ ಅಧಿಕಾರಿಗಳು ವಿವರ ಕೋರಿದ್ಧಾರೆ.

ತಾವು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಹಿಡಿತದಿಂದ ಪಾರಾಗಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಅನೇಕ ಮಂದಿ ತಮ್ಮ ಅಘೋಷಿತ ಮತ್ತು ಗೋಪ್ಯ ನಗದು ಮೇಲೆ ಶೇಕಡ 60ರಷ್ಟು ತೆರಿಗೆ ಪಾವತಿಸಿದ್ಧಾರೆ. ಹೀಗಾಗಿ ಈವರೆಗೆ ಸರ್ಕಾರಕ್ಕೆ 6,000 ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ಹಣ ಸಂಗ್ರಹವಾಗಿದೆ ಎಂದು ಪಸಾಯತ್ ಹೇಳಿದ್ದಾರೆ.   ಇದೇ ವೇಳೆ ನೋಟಿಸ್‍ಗಳನ್ನು ಪಡೆದ 1,092 ಮಂದಿ (50 ಲಕ್ಷ ರೂ.ಗಳಿಗೂ ಹೆಚ್ಚು ಹಣ ಠೇವಣಿ ಇಟ್ಟವರು) ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಅಘೋಷಿತ ನಗದು ಹೊಂದಿರುವ ಭಾರೀ ಸಂಖ್ಯೆಯ ಜನರನ್ನು ಪತ್ತೆ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಸಿಬಿಐ, ಜಾರಿ ನಿರ್ದೇಶನಾಲಯ, ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಹಾಗೂ ಇತರ ಸಂಸ್ಥೆಗಳಿಂದ ಕಾಳಧನ ವಿರುದ್ಧ ದೇಶಾದ್ಯಂತ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin