ಒಡಿಶಾ ಮೂಲದ ಕಾರ್ಪೆಂಟರ್’ನ ನಾಲಿಗೆ ಮತ್ತು ಮರ್ಮಾಂಗ ಕತ್ತರಿಸಿದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

tongue-cut

ಬೆಂಗಳೂರು, ಮಾ.18- ಕಾರ್ಪೆಂಟರ್ ಜತೆ ಜಗಳವಾಡಿದ ದುಷ್ಕರ್ಮಿಗಳು ನಾಲಿಗೆ, ಮರ್ಮಾಂಗ ಕತ್ತರಿಸಿ ಪರಾರಿಯಾಗಿರುವ ಘಟನೆ ವೈಟ್‍ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಒಡಿಶಾದವನಾದ ಬಿಜು ನಾಯಕ್ (20) ದುಷ್ಕರ್ಮಿಗಳಿಂದ ನಾಲಿಗೆ, ಮರ್ಮಾಂಗ ಕಳೆದುಕೊಂಡಿರುವ ಕಾರ್ಪೆಂಟರ್.
ವೈಟ್‍ಫೀಲ್ಡ್‍ನ ಇಮ್ಮಡಿಹಳ್ಳಿಯಲ್ಲಿ ಲೇಬರ್ ಶೆಡ್‍ನಲ್ಲಿ ವಾಸವಿರುವ ಬಿಜು ನಾಯಕ್ ಗುರುವಾರ ಮಧ್ಯರಾತ್ರಿ ಮೂತ್ರ ವಿಸರ್ಜನೆಗೆಂದು ಹೊರಬಂದಿದ್ದಾರೆ. ಆ ವೇಳೆ ಮುಸುಕು ಧರಿಸಿದ್ದ ನಾಲ್ವರು ದುಷ್ಕರ್ಮಿಗಳು ಬಿಜು ಜತೆ ಜಗಳವಾಡಿ ಎಳೆದೊಯ್ದು ನಾಲಿಗೆ, ಮರ್ಮಾಂಗ ಕತ್ತರಿಸಿ ಪರಾರಿಯಾಗಿದ್ದಾರೆ. ವೈದೇಹಿ ಆಸ್ಪತ್ರೆಯಲ್ಲಿ ಬಿಜು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಾತನಾಡಲು ಸಾಧ್ಯವಾಗದ ಕಾರಣ ಇಂದು ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಘಟನೆಗೆ ಕಾರಣವೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ವೈಟ್‍ಫೀಲ್ಡ್ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin