ಬೆಂಗಳೂರಲ್ಲೊಂದು ಭಯಾನಕ ಮರ್ಡರ್ : ಯುವಕನ ದೇಹವನ್ನು ಕತ್ತರಿಸಿ ಲೆದರ್ ಬ್ಯಾಗ್‍’ಗೆ ತುಂಬಿದರು.!

ಈ ಸುದ್ದಿಯನ್ನು ಶೇರ್ ಮಾಡಿ

Murder-Bengaluru

ಬೆಂಗಳೂರು,ಮಾ.18-ದುಷ್ಕರ್ಮಿಗಳು ಅಪರಿಚಿತ ಯುವಕನನ್ನು ಭೀಕರವಾಗಿ ಕೊಲೆ ಮಾಡಿ ದೇಹವನ್ನು ಮನಸೋಯಿಚ್ಛೆ ತುಂಡರಿಸಿ ಲೆದರ್ ಬ್ಯಾಗ್‍ನಲ್ಲಿ ಕಟ್ಟಿ ರಸ್ತೆಬದಿ ಬಿಸಾಡಿ ಪರಾರಿಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಯುವಕನ ಹೆಸರು, ವಿಳಾಸ ತಿಳಿದುಬಂದಿಲ್ಲ. ಸುಮಾರು 25ರಿಂದ 30 ವರ್ಷದವರಂತೆ ಕಾಣುವ ಈ ಯುವಕನನ್ನು ಯಾರು, ಏತಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದು ನಿಗೂಢವಾಗಿದೆ.   ನೈಸ್ ರಸ್ತೆ ಸಮೀಪದ ಸೇತುವೆ ಸಮೀಪದ ಕೊಮ್ಮಘಟ್ಟ ಮುಖ್ಯರಸ್ತೆಯ ಬಳಿ ಇಂದು ಮುಂಜಾನೆ ಈ ಮಾರ್ಗದಲ್ಲಿ ಹೋಗುತ್ತಿದ್ದವರು ರಸ್ತೆಬದಿ ಬಿದ್ದಿದ್ದ ಲೆದರ್ ಬ್ಯಾಗ್‍ನಿಂದ ರಕ್ತ ಸೋರುತ್ತಿರುವುದು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಬ್ಯಾಗ್‍ನ್ನು ತೆಗೆದು ನೋಡಿದಾಗ ಅದರಲ್ಲಿ ಅಪರಿಚಿತ ಯುವಕನ ರುಂಡಮುಂಡ ಬೇರ್ಪಟ್ಟಿತ್ತಲ್ಲದೆ ದೇಹವನ್ನು ತುಂಡರಿಸಿರುವುದು ಕಂಡುಬಂದಿದೆ. ದುಷ್ಕರ್ಮಿಗಳು ಈ ಯುವಕನನ್ನು ಬೇರೆ ಕಡೆ ಕೊಲೆ ಮಾಡಿ ರುಂಡಮುಂಡ ಬೇರ್ಪಡಿಸಿರುವುದಲ್ಲದೆ ದೇಹವನ್ನು ಮನಸೋಯಿಚ್ಛೆ ತುಂಡರಿಸಿರುವುದಲ್ಲದೆ ಗುರುತು ಸಿಗಬಾರದೆಂದು ಮುಖವನ್ನು ಸುಟ್ಟಿ ಲೆದರ್ ಬ್ಯಾಗ್‍ನಲ್ಲಿ ತುಂಬಿ ಈ ಭಾಗದಲ್ಲಿ ತಂದು ಬಿಸಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin