ಬ್ರಿಟನ್ ವಿರುದ್ಧವೂ ತಿರುಗಿಬಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಮಾ.18-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀತಿ ಬಗ್ಗೆ ಮಿತ್ರ ರಾಷ್ಟ್ರಗಳೂ ತೀವ್ರ ಅಸಮಾಧಾನಗೊಂಡಿವೆ. ತಮ್ಮ ಫೋನ್‍ಗಳನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕದ್ದಾಲಿಸಿದ್ದಾರೆ ಎಂಬ ತಮ್ಮ ಆರೋಪವನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿರಾಕರಿಸಿರುವ ಟ್ರಂಪ್. ಇದಕ್ಕೆ ಬ್ರಿಟನ್ ಕೂಡ ತಮ್ಮ ಮೇಲೆ ಕಣ್ಗಾವಲು ಹಾಕಿದೆ ಎಂದು ಆರೋಪಿಸಿದ್ಧಾರೆ.   ಅಮೆರಿಕದ ಅತ್ಯಂತ ನಿಕಟ ಮಿತ್ರ ರಾಷ್ಟ್ರವಾಗಿರುವ ಬ್ರಿಟನ್ ಈಗ ಟ್ರಂಪ್ ವರ್ತನೆಯಿಂದ ತೀವ್ರ ಬೇಸರಗೊಂಡಿದೆ.

ಎಲ್ಲರನ್ನೂ ಅನುಮಾನದಿಂದ ನೋಡುವ ಅಮೆರಿಕ ಅಧ್ಯಕ್ಷರ ವರ್ತನೆ ಇಂಗ್ಲೆಂಡ್ ಅಸಮಾಧಾನಕ್ಕೆ ಕಾರಣವಾಗಿದೆ. ಬರಾಕ್ ಒಬಾಮಾ ತಮ್ಮ ಫೋನ್‍ಗಳನ್ನು ಕದ್ದಾಲಿಸಿದ್ದಾರೆ. ಅಲ್ಲದೇ ಬ್ರಿಟನ್ ಕೂಡ ತಮ್ಮ ಸರ್ಕಾರದ ಮೇಲೆ ಕಣ್ಗಾವಲು ಇಟ್ಟಿತ್ತು ಎಂಬ ತಮ್ಮ ಹೇಳಿಕೆಗಳಿಗೆ ಟ್ರಂಪ್ ಬದ್ದವಾಗಿದ್ದು, ರಾಜತಾಂತ್ರಿಕ ಬಿಕ್ಕಟ್ಟಿಗೆ ಎಡೆ ಮಾಡಿಕೊಟ್ಟಿದೆ. ಜರ್ಮನ್ ಚಾನ್ಸುಲರ್ ಆಂಜೆಲಾ ಮಾರ್ಕೆಲ್ ಅವರು ಪ್ರಥಮ ಬಾರಿಗೆ ಅಮೆರಿಕ ಭೇಟ ವೇಳೆಯೇ ಟ್ರಂಪ್ ಮಿತ್ರಪಕ್ಷಗಳ ಬಗ್ಗೆ ಬಹಿರಂಗ ಆರೋಪಗಳ ಹೇಳಿಕೆಗಳನ್ನು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin