ವೃದ್ಧಾಶ್ರಮ, ಅನಾಥಶ್ರಮಗಳಿಗೆ ಉಚಿತ ಅಕ್ಕಿ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

Oldage

ಬೆಳಗಾವಿ, ಮಾ.18- ಅನ್ನಭಾಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿರುವ ರಾಜ್ಯಸರ್ಕಾರ ಹೆಚ್ಚಳ ಮಾಡಿರುವ ಅಕ್ಕಿ ಭಾಗ್ಯವನ್ನು ಏಪ್ರಿಲ್ ತಿಂಗಳಿನಿಂದ ಜಾರಿಗೊಳಿಸಲಾಗುತ್ತದೆ ಮತ್ತು ಉಚಿತ ಊಟದ ವ್ಯವಸ್ಥೆ ಇರುವ ವೃದ್ಧಾಶ್ರಮ, ಅನಾಥಶ್ರಮಗಳಿಗೆ ದಾಸೋಹ ಯೋಜನೆಯಡಿ ಉಚಿತ ಅಕ್ಕಿ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಇಂದಿಲ್ಲಿ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್‍ದಾರರಿಗೆ ಈ ಬಾರಿ ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ ಐದು ಕೆಜಿಯಿದ್ದ ಅಕ್ಕಿಯನ್ನು ಏಳು ಕೆಜಿಗೆ ಹೆಚ್ಚಳ ಮಾಡಿದ್ದಾರೆ. ಒಂದು ಕುಟುಂಬಕ್ಕೆ ಒಂದು ಕೆಜಿ ಬೇಳೆಕಾಳು, ಗ್ಯಾಸ್ ಇಲ್ಲದವರಿಗೆ ಮೂರು ಲೀಟರ್ ಸೀಮೆಎಣ್ಣೆ, ಗ್ರಾಮೀಣ ಪ್ರದೇಶದಲ್ಲಿ ಗ್ಯಾಸ್ ಇದ್ದವರಿಗೂ ಒಂದು ಲೀಟರ್ ಸೀಮೆಎಣ್ಣೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ದಾಸೋಹ ಯೋಜನೆಯಡಿ ಅನಾಥಶ್ರಮ, ವೃದ್ದಾಶ್ರಮ, ಸಂಘ ಸಂಸ್ಥೆಗಳಲ್ಲಿ ಉಚಿತವಾಗಿ ಊಟ ನೀಡುವವರಿಗೆ, ಉಚಿತವಾಗಿ ಅಕ್ಕಿ ವಿತರಣೆಗೆ ಕ್ರಮ ವಹಿಸಲಾಗಿದೆ. ಬೆಳಗಾವಿಗೆ 13 ಲಕ್ಷ ಲೀಟರ್‍ಗೂ ಅಧಿಕ ಸೀಮೆಎಣ್ಣೆ ವಿತರಿಸಲಾಗಿದೆ.   ಸೀಮೆಎಣ್ಣೆ ಬೇಡ ಎನ್ನುವವರಿಗೆ ರೀಚಾರ್ಜೆಬಲ್ ಎಲ್‍ಇಡಿ ಬಲ್ಬ್ ನೀಡಲಾಗುವುದು. ಅನಿಲ ಭಾಗ್ಯ ಯೋಜನೆಯಡಿ ಗ್ಯಾಸ್ ಇಲ್ಲದವರಿಗೆ ಗ್ಯಾಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin