2015-16 ನೇ ಸಾಲಿನಲ್ಲಿ 9.8 ಲಕ್ಷ ಆರ್‍ಟಿಐ ಅರ್ಜಿ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

RTI-01

ನವದೆಹಲಿ, ಮಾ.18- ಮಾಹಿತಿ ಹಕ್ಕು ಕಾಯ್ದೆ (ಆರ್‍ಟಿಐ) ಅಡಿ ವಿವಿಧ ಮಾಹಿತಿಗಳನ್ನು ಕೋರಿ 9.76 ಲಕ್ಷ ಮಂದಿ 2015-16ನೆ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದರ ಹಿಂದಿನ ವರ್ಷಕ್ಕಿಂತ ಇದು ಶೇ.20ರಷ್ಟು ಹೆಚ್ಚಳವಾಗಿದೆ. ಆದಾಗ್ಯೂ ಪ್ರತಿ 10 ಆರ್‍ಟಿಐ ಅರ್ಜಿಗಳಲ್ಲಿ ನಾಲ್ಕು ಮನವಿಗಳನ್ನು ನಿಗೂಢ ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ ಎಂದು ಕೇಂದ್ರ ಮಾಹಿತಿ ಆಯೋಗ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ತಿಳಿಸಿದೆ.  2014-15ರಲ್ಲಿ 7.55 ಲಕ್ಷ ಆರ್‍ಟಿಐ ಅರ್ಜಿಗಳನ್ನು ಸಲ್ಲಿಸಲಾಗಿತ್ತು. 2015-16ರಲ್ಲಿ ಇದು ಶೇ.22.67ರಷ್ಟು ಅಥವಾ 2.21 ಲಕ್ಷಗಳಷ್ಟು ಹೆಚ್ಚಾಗಿದೆ. ಇದೇ ವೇಳೆ ವಿವಿಧ ಕಾರಣಗಳನ್ನು ನೀಡಿ ಅರ್ಜಿಗಳನ್ನು ತಿರಸ್ಕರಿಸುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin