ಛತ್ತೀಸಗಢದಲ್ಲಿ ಗುಂಡಿನ ಚಕಮಕಿ, ಐವರು ನಕ್ಸಲರ ಹತ್ಯೆ, ಇಬ್ಬರು ಪೊಲೀಸರು ಹುತ್ಮಾತ

ಈ ಸುದ್ದಿಯನ್ನು ಶೇರ್ ಮಾಡಿ

fIRING--NAXALA

ರಾಯಪುರ, ಮಾ.19-ಛತ್ತೀಸಗಢದಲ್ಲಿ ಮತ್ತೆ ನಕ್ಸಲೀಯರ ಕ್ರೌರ್ಯ ಮುಂದುವರಿದಿದೆ. ಯೋಧರು ಮತ್ತು ಪೊಲೀಸರಿಗೆ ಮೃತ್ಯುಕೂಪ ಎಂದೇ ಪರಿಗಣಿಸಲ್ಪಟ್ಟಿರುವ ದಂತೆವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಿನ್ನೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆ ಸೇರಿದಂತೆ ಐವರು ನಕ್ಸಲರು ಹತರಾಗಿದ್ದು, ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ.   ಈ ಎನ್‍ಕೌಂಟರ್‍ನಲ್ಲಿ ಇಬ್ಬರು ಸಬ್‍ಇನ್ಸ್‍ಪೆಕ್ಟರ್‍ಗಳೂ ಸೇರಿದಂತೆ ಮೂವರಿಗೆ ತೀವ್ರ ಗಾಯಗಳಾಗಿವೆ. ಇದೇ ವೇಳೆ ಗಾಯಗೊಂಡ ಮತ್ತೊಬ್ಬ ನಕ್ಸಲ್‍ನನ್ನು ಬಂಧಿಸಲಾಗಿದೆ. ಹತರಾದ ಮತ್ತು ಸೆರೆ ಸಿಕ್ಕಿರುವ ನಕ್ಸಲೀಯರಿಂದ ಎಕೆ-47 ರೈಫಲ್‍ಗಳೂ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಂತೆವಾಡ ಜಿಲ್ಲೆಯ ಅರಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಬರ್ಗಮ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಜಿಲ್ಲಾ ಮೀಸಲು ಸಮೂಹ (ಡಿಆರ್‍ಜಿ) ಮತ್ತು ಬಂಡುಕೋರರ ನಡುವೆ ನಿನ್ನೆ ಸಂಜೆ ಭೀಕರ ಗುಂಡಿನ ಕಾಳಗ ನಡೆದಿದೆ ಎಂದು ಬಸ್ತಾರ್ ವಲಯ ಪೊಲೀಸ್ ಮಹಾ ನಿರೀಕ್ಷಕ (ಉಸ್ತುವಾರಿ) ಪಿ.ಸುಂದರ್‍ರಾಜ್ ತಿಳಿಸಿದ್ದಾರೆ.  ಮಾವೋವಾದಿಗಳ ಮಲಾನ್‍ಗಿರ್ ಪ್ರದೇಶ ಸಮಿತಿಗೆ ಸೇರಿದ ಇಬ್ಬರು ಮಹಿಳೆಯರೂ ಸೇರಿದಂತೆ ಐವರು ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ಐಜಿಪಿ ಹೇಳಿದ್ದಾರೆ. ಕಳೆದ ವಾರ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ 12 ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin