ಜಿಎಸ್‍ಟಿ ಮಸೂದೆಗೆ ನಾಳೆ ಕೇಂದ್ರ ಸಚಿವ ಸಂಪುಟ ಅಸ್ತು ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

GSt

ನವದೆಹಲಿ, ಮಾ.19-ಹೊಸ ಅಪರೋಕ್ಷ ತೆರಿಗೆಯಾದ ಜಿಎಸ್‍ಟಿಗೆ(ಸರಕು ಮತ್ತು ಸೇವಾ ತೆರಿಗೆ) ಬೆಂಬಲ ನೀಡುವ ವಿಧೇಯಕಕ್ಕೆ ನಾಳೆ ನಡೆಯುವ ಕೇಂದ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಜುಲೈ 1ರಿಂದ ಜಿಎಸ್‍ಟಿಯನ್ನು ಜಾರಿಗೊಳಿಸಲು ಉದ್ದೇಶಿಸಿರುವ ಸರ್ಕಾರವು ಇದನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆಯಲಿದೆ.  ಜಿಎಸ್‍ಟಿಗೆ ಸಂಬಂಧಿಸಿದಂತೆ ನಾಲ್ಕು ವಿಧೇಯಕಗಳು-ಪರಿಹಾರ ಕಾನೂನು, ಕೇಂದ್ರ-ಜಿಎಸ್‍ಟಿ ಅಥವಾ ಸಿ-ಜಿಎಸ್‍ಟಿ, ಸಮಗ್ರ-ಜಿಎಸ್‍ಟಿ ಅಥವಾ ಐ-ಜಿಎಸ್‍ಟಿ ಹಾಗೂ ಕೇಂದ್ರಾಡಳಿತ ಪ್ರದೇಶ-ಜಿಎಸ್‍ಟಿ ಅಥವಾ ಯುಟಿ-ಜಿಎಸ್‍ಟಿ ಇವುಗಳು ನಾಳೆ ಬೆಳಗ್ಗೆ ನಡೆಯುವ ಸಂಪುಟ ಸಭೆಯಲ್ಲಿ ಒಟ್ಟಿಗೆ ಅನುಮೋದನೆ ಪಡೆಯುವ ನಿರೀಕ್ಷೆ ಇದೆ. ಜಿ-ಎಸ್‍ಟಿ ಮಂಡಳಿ ಈ ಹಿಂದೆ ನಡೆದ ತನ್ನ ಎರಡು ಸಭೆಗಳಲ್ಲಿ ರಾಜ್ಯ ಜಿಎಸ್‍ಟಿ ಅಥವಾ ಎಸ್-ಜಿಎಸ್‍ಟಿ ಸೇರಿದಂತೆ ಈ ನಾಲ್ಕು ಮಸೂದೆಗಳಿಗೆ ಅನುಮೋದನೆ ನೀಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin