ತಿಮ್ಮಪ್ಪನ ದರ್ಶನ ಪಡೆದು ಬರುವಾಗ ಅಪಘಾತ, ಮೂವರು ಸಾವು, 10 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Accident--01

ಚಿತ್ತೂರು, ಮಾ.19-ಟೆಂಪೋ ಟ್ರಾವಲರ್‍ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿನಾಮ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿ 10 ಮಂದಿ ಗಾಯಗೊಂಡಿರುವ ಘಟನೆ ಲಕ್ಷ್ಮಯ್ಯಕಂಡ್ರಿಗಾ ಗ್ರಾಮ ಬಳಿ ಸಂಭವಿಸಿದೆ.  ಮೃತರನ್ನು ಕರ್ನಾಟಕ ರಾಜ್ಯದ ತುಮಕೂರು ಮೂಲದವರಾದ ಟಿಟಿ ಚಾಲಕ ವಿಶಾಲಬಾಬು (35), ಕಾಮಾಕ್ಷಿ (35) ಮತ್ತು ಮಗು ರಿದಯ್ (2) ಎಂದು ಗುರುತಿಸಲಾಗಿದೆ. ಟಿಟಿ ವಾಹನದಲ್ಲಿದ್ದ ಇತರ 10 ಮಂದಿ ಗಾಯಗೊಂಡಿದದು, ಮೂವರ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ಚಿತ್ತೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಹಾಗೂ ಗಾಯಾಳುಗಳು ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ತಮ್ಮ ಊರಿಗೆ ಬರುವಾಗ ಚಿತ್ತೂರು ತಾಲೂಕಿನ ಲಕ್ಷ್ಮಯ್ಯಕಂಡ್ರಿಗಾ ಗ್ರಾಮ ಬಳಿ ಈ ಅವಘಡ ಸಂಭವಿಸಿದೆ. ಬಂಗಾರುಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin