ಕಾವೇರಿ, ಕೃಷ್ಣಾನದಿ ವಿವಾದಗಳಲ್ಲಿ ಕರ್ನಾಟಕದ ಪರ ವಕಾಲತ್ತು ವಹಿಸಿದ್ದ ಖ್ಯಾತ ವಕೀಲ ಅನಿಲ್ ದಿವಾನ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Anil-Diwan--01

ನವದೆಹಲಿ/ಬೆಂಗಳೂರು,ಮಾ.20– ಭಾರತದ ಖ್ಯಾತ ಹಿರಿಯ ವಕೀಲ ಹಾಗೂ ಸಂವಿಧಾನ ತಜ್ಞ ಅನಿಲ್ ಬಿ.ದಿವಾನ್ ಇಂದು ಮುಂಜಾನೆ ದೆಹಲಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.   ಕಾವೇರಿ, ಕೃಷ್ಣಾನದಿ ವಿವಾದಗಳಲ್ಲಿ ಕರ್ನಾಟಕದ ಪರ ಸುಪ್ರೀಂಕೋರ್ಟ್‍ನಲ್ಲಿ ವಕಾಲತ್ತು ವಹಿಸಿದ್ದ ದಿವಾನ್ ಅವರು ಅನೇಕ ಗಂಭೀರ ಕಾನೂನು ಪ್ರಕರಣಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.   15ನೇ ಮೇ 1930ರಂದು ಜನಿಸಿದ ಅವರು, ಲಾ ಏಷ್ಯಾದ ಅಧ್ಯಕ್ಷರಾಗಿ, ಬಾರ್ ಅಸೋಸಿಯೇಷನ್ ಆಫ್ ಇಂಡಿಯಾದ ಸಹಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಉನ್ನತ ಮಟ್ಟದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಕಸ್ತಿ(ಪಿಐಎಎಲ್) ಅರ್ಜಿಗಲ ಪರ ಸುಪ್ರೀಂಕೋರ್ಟ್‍ಗಳಲ್ಲಿ ಸಮರ್ಥ ವಾದ ಮಂಡಿಸಿದ್ದ ಅವರು, ಇಂಟರ್ ನ್ಯಾಷನಲ್ ಲಾ ಅಸೋಸಿಯೇಷನ್‍ನ ಜಲಸಂಪನ್ಮೂಲ ಕಾನೂನು ಕುರಿತ ಸಮತಿಯ ಸದಸ್ಯರೂ ಆಗಿದ್ದರು.  ಅನಿಲ್ ದಿವಾನ್ ಅವರ ಪುತ್ರ ಶ್ಯಾಮ್ ದಿವಾನ್ ಸುಪ್ರೀಂಕೋರ್ಟ್ ವಕೀಲರಾಗಿದ್ದಾರೆ. ಅವರ ಸೊಸೆ ಮಾಧವಿ ದಿವಾನ್ ಸಹ ನ್ಯಾಯವಾದಿಯಾಗಿದ್ದು, ಕಾನೂನು ಪುಸ್ತಕಗಳ ಲೇಖಕಿಯಾಗಿದ್ದಾರೆ.

ಸಿದ್ದರಾಮಯ್ಯ ಸಂತಾಪ:

ಖ್ಯಾತ ಹಿರಿಯ ವಕೀಲ ಅನಿಲ್ ದಿವಾನ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಕಾವೇರಿ ಮತ್ತು ಕೃಷ್ಣ ಜಲ ವಿವಾದಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು ಎಂದು ಅವರನ್ನು ಸ್ಮರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin