ಜಿಎಸ್‍ಟಿ ಸೇರಿದಂತೆ 4 ಮಸೂದೆಗಳಿಗೆ ಕೇಂದ್ರ ಸಂಪುಟ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

GST-Tax

ನವದೆಹಲಿ, ಮಾ.20-ಹೊಸ ಅಪರೋಕ್ಷ ತೆರಿಗೆಯಾದ ಜಿಎಸ್‍ಟಿಗೆ(ಸರಕು ಮತ್ತು ಸೇವಾ ತೆರಿಗೆ) ಬೆಂಬಲ ನೀಡುವ ವಿಧೇಯಕಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಇಂದು ಒಪ್ಪಿಗೆ ನೀಡಿದೆ. ಇದರಿಂದಾಗಿ ಜುಲೈ 1ರಿಂದ ಜಿಎಸ್‍ಟಿಯನ್ನು ಜಾರಿಗೊಳಿಸಲು ಉದ್ದೇಶಿಸಿರುವ ಸರ್ಕಾರಕ್ಕೆ ಹಾದಿ ಸುಗಮವಾಗಿದ್ದು, ಇದನ್ನು ಸಂಸತ್ತಿನಲ್ಲಿ ಈ ವಾರ ಮಂಡಿಸಿ ಅನುಮೋದನೆ ಪಡೆಯಲಿದೆ. ಜಿಎಸ್‍ಟಿಗೆ ಸಂಬಂಧಿಸಿದಂತೆ ನಾಲ್ಕು ವಿಧೇಯಕಗಳು-ಪರಿಹಾರ ಕಾನೂನು, ಕೇಂದ್ರ-ಜಿಎಸ್‍ಟಿ ಅಥವಾ ಸಿ-ಜಿಎಸ್‍ಟಿ, ಸಮಗ್ರ-ಜಿಎಸ್‍ಟಿ ಅಥವಾ ಐ-ಜಿಎಸ್‍ಟಿ ಹಾಗೂ ಕೇಂದ್ರಾಡಳಿತ ಪ್ರದೇಶ-ಜಿಎಸ್‍ಟಿ ಅಥವಾ ಯುಟಿ-ಜಿಎಸ್‍ಟಿ ಇವುಗಳಿಗೆ ಇಂದು ಬೆಳಗ್ಗೆ ನಡೆದ ಸಂಪುಟ ಸಭೆಯಲ್ಲಿ ಒಟ್ಟಿಗೆ ಅನುಮೋದನೆ ನೀಡಲಾಯಿತು. ಜಿ-ಎಸ್‍ಟಿ ಮಂಡಳಿ ಈ ಹಿಂದೆ ರಾಜ್ಯ ಜಿಎಸ್‍ಟಿ ಅಥವಾ ಎಸ್-ಜಿಎಸ್‍ಟಿ ಸೇರಿದಂತೆ ಈ ನಾಲ್ಕು ಮಸೂದೆಗಳಿಗೆ ಅನುಮೋದನೆ ನೀಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin