ನನ್ನ ಮೇಲೆ ಲೈಂಗಿಕ ಕಿರಕುಳದ ಯತ್ನ ನಡೆದಿತ್ತು : ಟ್ವಿಂಕಲ್ ಖನ್ನಾ

ಈ ಸುದ್ದಿಯನ್ನು ಶೇರ್ ಮಾಡಿ

Twinle-Khanna

ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವವರನ್ನು ಅಸಹ್ಯಕರ ಹೊಂಚು ಹಾಕುವ ಕಪ್ಪೆಗಳು ಎಂದು ಬಾಲಿವುಡ್ ಅಭಿನೇತ್ರಿ, ಲೇಖಕಿ ಮತ್ತು ಅಂಕಣಗಾತಿ ಟ್ವಿಂಕಲ್ ಖನ್ನಾ ಕಟುವಾಗಿ ಟೀಕಿಸಿದ್ದಾಳೆ. ಬೆಂಗಳೂರಿನ ದಿ ವೈರಲ್ ಫೀವರ್ (ಟಿವಿಎಫ್) ಸಂಸ್ಥೆಯ ಮುಖ್ಯಸ್ಥ ಅರುಣಾಭ್ ಕುಮಾರ್ ಪ್ರಕರಣ ಸೇರಿದಂತೆ ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ಆ್ಯಕ್ಷನ್‍ಹೀರೋ ಅಕ್ಷಯ್ ಕುಮಾರ್ ಪತ್ನಿಯೂ ಆದ ಟ್ವಿಂಕಲ್ ಖಂಡಿಸಿದ್ದಾಳೆ. ಟೈಮ್ಸ್ ಆಫ್ ಇಂಡಿಯಾದ ಅಂಕಣದಲ್ಲಿ ಈ ಬಗ್ಗೆ ಟೀಕಿಸಿರುವ ಟ್ವಿಂಕಲ್, ಇಂಥ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಉದ್ಯೋಗಸ್ಥ ಮಹಿಳೆಯರು ಇಂಥ ದುಷ್ಟರಿಂದ ಎದುರಿಸುವ ಲೈಂಗಿಕ ಕಿರುಕುಳವನ್ನು ಲಘುವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾಳೆ.

ಅರುಣಾಭ್ ಕುಮಾರ್ ಹೇಳಿಕೆಗೆ(ನಾನು ಬಹು ಸಂಗಾತಿಯನ್ನು ಇಷ್ಟಪಡುವ ವ್ಯಕ್ತಿ. ಮಹಿಳೆಯರು ನನಗೆ ಸೆಕ್ಸಿಯಾಗಿ ನಾನು ಆಕೆಯನ್ನು ಸೆಕ್ಸಿ ಎಂದು ಕರೆಯುತ್ತೇನೆ, ಇದರಲ್ಲಿ ತಪ್ಪೇನಿದೆ?) ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಟಿಕೆ, ಆಕೆಯು ನಗ್ನಳಾಗಿದ್ದರೆ ಹಾಗೂ ಆತ ಪಿಂಪ್ (ತಲೆಹಿಡುಕ) ಆಗಿದ್ದರೆ, ಸೆಕ್ಸಿ ಎಂಬ ಆತನ ಹೇಳಿಕೆಯನ್ನು ಒಪ್ಪಿಕೊಳ್ಳಬಹುದು ಎಂದು ತರಾಟೆಗೆ ತೆಗೆದುಕೊಂಡಿದ್ಧಾಳೆ.   ನಾನು ನಟಿಯಾಗಿದ್ದಾಗಲೂ ನನ್ನ ಮೇಲೆ ಲೈಂಗಿಕ ಕಿರಕುಳದ ಯತ್ನ
ನಡೆದಿತ್ತು ಎಂಬುದನ್ನು ಆಕೆ ಬಹಿರಂಗಗೊಳಿಸಿದ್ದಾರೆ. ಚಿತ್ರೋದ್ಯಮದ ಅತ್ಯಂತ ಪ್ರಭಾವಿ ವ್ಯಕ್ತಿಯೊಬ್ಬ ನನಗೆ ಫೋನ್‍ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ. ನಾನು ಅತ್ತುಬಿಟ್ಟೆ. ಕೆಲವು ದಿನಗಳ ನಂತರ ಇದೇ ರೀತಿಯ ಘಟನೆ ನಡೆಯಿತು.   ನಾನು ಏನೂ ಅರ್ಥ ಆಗದವಳಂತೆ ನಟಿಸಿದೆ. ಆತನ ಸಿನಿಮಾ ಪ್ರಾಜೆಕ್ಟ್ ಪೂರ್ಣಗೊಳಿಸಬೇಕಾದ ಕಾರಣ ನಾನು ಹಾಗೆ ನಟಿಸಿದೆ.   ಭಾರತದಲ್ಲಿ ಶೇ.38ರಷ್ಟು ಮಹಿಳೆಯರು ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರೆ ಎಂದು ಟ್ವಿಂಕಲ್ ಹೇಳಿದ್ದಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin