ಪರೀಕ್ಷಾ ಕೇಂದ್ರಗಳಿಗೆ ಬೀಗ ಜಡಿದು ಸಿಬ್ಬಂದಿ ನಾಪತ್ತೆ : ಅಕ್ಷರಸ್ಥರಿಂದಲೇ ಪರೀಕ್ಷೆ ಬರೆಸಿದ ನವ ಸಾಕ್ಷರರು

ಈ ಸುದ್ದಿಯನ್ನು ಶೇರ್ ಮಾಡಿ

exam
ಚಿಕ್ಕಬಳ್ಳಾಪುರ, ಮಾ.20- ಪರೀಕ್ಷಾ ಕೇಂದ್ರಗಳಿಗೆ ಬೀಗ ಜಡಿದು ಸಿಬ್ಬಂದಿ ನಾಪತ್ತೆ, ಪರೀಕ್ಷಾ ಕೇಂದ್ರದತ್ತ ಯಾರೊಬ್ಬರೂ ಸುಳಿಯದ ನಿಜವಾದ ನವಸಾಕ್ಷರರು, ಸಾಕ್ಷರ, ಹಾಗೂ ಮಕ್ಕಳಿಂದ ಪರೀಕ್ಷೆ ಬರೆಯಿಸಲು ಮುಂದಾದ ಪರೀಕ್ಷಾ ಸಿಬ್ಬಂದಿ…ಇವೆಲ್ಲಾ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನವಸಾಕ್ಷರರಿಗಾಗಿ ಆಯೋಜಿಸಿದ್ದ ಮೌಲ್ಯಮಾಪನ ಪರೀಕ್ಷಾ ಕೇಂದ್ರದ ಅವಾಂತರ ಇದರಿಂದಾಗಿ ಜಿಲ್ಲೆಯಲ್ಲಿ ನಿನ್ನೆ ನಡೆದ ನವಸಾಕ್ಷರರ ಮೌಲ್ಯಮಾಪನ ಪರೀಕ್ಷೆಯು ಅವ್ಯವಸ್ಥೆಯ ಅಗರವಾಯ್ತು.ರಾಷ್ಟ್ರೀಯ ಸಾಕ್ಷರತಾ ಮಿಷನ್ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ದಿಸೆಯಲ್ಲಿ ಸಾಕ್ಷರತಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಇದನ್ನು ಪ್ರತಿಶತವಾಗಿ ಫಲಪ್ರದದಾಯಕವಾಗಲು ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ ಪರೀಕ್ಷಾ ಬರೆಯಿಸುವ ವ್ಯವಸ್ಥೆ ಮಾಡಿದ್ದು ಅದನ್ನು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವಯಸ್ಕರ ಶಿಕ್ಷಣ ಇಲಾಖೆ ರಾಯಬಾರ ಮಾಡಲೊರಟಿದೆ. ದುರಂತ ಎಂದರೆ ಅನಕ್ಷರಸ್ಥರಿಗೆ ಪಾಠ ಕಲಿಸುವುದಾಗಿ ಬಯಲಿಗೆ ಹೊರಟ ಈ ಪಡೆ ಮನಸ್ಪೂರ್ವಕವಾಗಿ ಯಾರು ಕಲಿಯಲು ಬಾರರು ಎಂದು ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾದವರನ್ನು ಮತ್ತು 5ನೇ ತರಗತಿಯ ಮಕ್ಕಳನ್ನು ಶಾಲೆ ಬಿಟ್ಟ ಮಕ್ಕಳೆಂದು ಗುರ್ತುಮಾಡಿ ಲೆಕ್ಕ ಸರ್ಕಾರಕ್ಕೆ ಲೆಕ್ಕ ತೋರಿಸಿ ಸರ್ಕಾರದ ಬೊಕ್ಕಸಕ್ಕೆ ಲುಕ್ಸಾನ ಮಾಡಲೊರಟಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆ ತಾಜಾ ಉದಾಹರಣೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ತಾಲ್ಲೂಕಿನ ತಿಪ್ಪೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮೌಲ್ಯಮಾಪನ ಪರೀಕ್ಷೆ ಗೊಂದಲದ ಗೂಡಾಗಿ ಪರಿಣಮಿಸಿದ್ದು ಜ್ವಲಂತ ಸಾಕ್ಷಿ , ಪರೀಕ್ಷೆ ಸಮಯ, ಸ್ಥಳ ಎಲ್ಲವನ್ನು ಈಮೊದಲೇ ನಿಗಧಿಗೊಳಿಸಿದ್ದ ವಯಸ್ಕರ ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರದ ಬಾಗಿಲೇ ತೆರೆದಿರಲಿಲ್ಲ, ಪೂರ್ವಸಿದ್ದತೆಯಲ್ಲಿ ಪರಿವೀಕ್ಷಕರಾಗಿ ಬಂದಿದ್ದವರು ಅಂಗಡಿ ಮುಂಗಟ್ಟುಗಳ ಮುಂದೆ ಕೂತು ಕಾಫಿ ಕುಡಿಯಲಾರಂಭಿಸಿದರು. ಬೆಳಿಗ್ಗೆ 10.30ಕ್ಕೆ ನಡೆಯಬೇಕಿದ್ದ ಪರೀಕ್ಷೆ ಮಧ್ಯಾಹ್ನದವರೆವಿಗೂ ಯಾರೊಬ್ಬ ನವಸಾಕ್ಷರರು ಪರೀಕ್ಷಾ ಕೇಂದ್ರದತ್ತ ಸುಳಿದಿರಲಿಲ್ಲ, ಸಾಕ್ಷರ ಭಾರತ್ ಕಾರ್ಯಕ್ರಮದಡಿಯಲ್ಲಿ ಕಲಿಕಾರ್ಥಿ(ನವಸಾಕ್ಷರರು) ಈ ಮಾರ್ಚಿ ಅಂತ್ಯದೊಳಗೆ ಪರೀಕ್ಷೆಗೆ ಕುಳಿತಿದ್ದ ಮಾಹಿತಿಯನ್ನು ಲೋಕಶಿಕ್ಷಣ ನಿರ್ಧೇಶನಾಲಯಗಳಿಗೆ ಕಳುಹಿಸುವ ತರಾತುರಿಗೆ ಮುಗಿಬಿದ್ದಿದ್ದ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಕೆ ನವಸಾಕ್ಷರರು ಯಾರೂ ಪರೀಕ್ಷೆ ಬರೆಯಲು ಬಾರದ ಕಾರಣ ಎಸ್ಸೆಸ್ಸೆಲ್ಸಿ ಪಿಯುಸಿ ಮಾಡಿ ಹಾದಿ ಬೀದಿಗಳಲ್ಲಿ ತಿರುಗಾಡುತ್ತಿದ್ದವರನ್ನೇ ಪರೀಕ್ಷಾ ಕೇಂದ್ರಕ್ಕೆ ಮಧ್ಯಾಹ್ನದ ವೇಳೆ ಕರೆತರುವ ಪ್ರಯತ್ನ ಮಾಡಿ ಅವರಿಂದ ಪರೀಕ್ಷೆ ಬರೆಯಿಸಿ ಲೆಕ್ಕ ತೋರಿಸುವ ಹುನ್ನಾರ ಚಿಕ್ಕಬಳ್ಳಾಪುರ, ಚಿಂತಾಮಣಿ ಕಡೆಗಳಲ್ಲಿ ಕಂಡು ಬಂದ ಸಾಮಾನ್ಯ ಸಂಗತಿಯಾಗಿತ್ತು.

ಇಲಾಖಾ ಮಾಹಿತಿಯಂತೆ ತಾಲ್ಲೂಕಿನಲ್ಲಿ ಒಟ್ಟು 19563 ಮಂದಿ ಅನಕ್ಷರಸ್ಥರಿದ್ದು ಅವರಿಗೆ ತರಬೇತಿ ನೀಡಲು 68 ಮಂದಿ ಪ್ರೇರಕರು, 34 ಮಂದಿ ಸದಸ್ಯ ಕಾರ್ಯದರ್ಶಿಗಳು ಮತ್ತು ಅವರಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ಪಿಡಿಒ ಮತ್ತು ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಸದಸ್ಯ ರಾಗಿರುತ್ತಾರೆ , ತಾಲ್ಲೂಕಿನ ಅನಕ್ಷರಸ್ಥರಿಗೆ ತರಬೇತಿ ನೀಡಲು ಪ್ರತಿ ತಿಂಗಳು 2 ಸಾವಿರ ರೂಗಳನ್ನು ಗೌರವ ಧನವಾಗಿ ನೀಡಲಾಗುವುದು.ದೇಶ ಮುಂದುವರೆಯಬೇಕಾದರೆ ದೇಶದಲ್ಲಿ ಅನಕ್ಷರತೆಯನ್ನು ತೊಲಗಿಸಿ ಪ್ರತಿಯೊಬ್ಬರಲ್ಲೂ ಅಕ್ಷರ ಜ್ಞಾನವನ್ನು ತುಂಬಿ ಸಮಾಜಕ್ಕೆ ಮಾಧರಿಯಾಗಬೇಕಾದ ಶಿಕ್ಷಕರೇ ಖುದ್ದು ಮುಂದೆ ನಿಂತು ಇಂತಹ ಅಕ್ರಮಗಳಿಗೆ ಸಹಕರಿಸುತ್ತಾ ಸುಮ್ಮನಿರುವುದು ಅಮಾನವಿಯ ಮತ್ತು ಕಳಕಳಿಯಿಲ್ಲದೆ ಬೇಜವಬ್ದಾರಿ ಮೆರೆಯುತ್ತಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆಕಲಿಕಾರ್ಥಿಗಳು ಸ್ವಯಂಪ್ರೇರಣೆಯಿಂದ ಪರೀಕ್ಷೆ ಬರೆಯಲು ಬರುವುದಿಲ್ಲ, ಅವರನ್ನು ಬಲವಂತದಿಂದ ಕರೆತರಬೇಕಾಗುತ್ತದೆ, ಇದಕ್ಕಾಗಿಯೇ ಕೆಲವರನ್ನು ನಿಯೋಜಿಸಲಾಗುತ್ತು, ಪರೀಕ್ಷೆ ಬರೆಯಲು ಬರಬೇಕಿತ್ತು ಪರೀಕ್ಷಾ ಕೇಂದ್ರ ಬಾಗಿಲು ತೆರೆಯದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ನಾನು ಜಿಲ್ಲೆಯ ಬಾಗೇಪಲ್ಲಿ ಕಡೆ ಪರೀಕ್ಷಾ ಕೇಂದ್ರ ವೀಕ್ಷಣೆ ಮಾಡಲು ಬಂದಿದ್ದೇನೆ, ಈ ಕುರಿತು ಸಂಭಂದಪಟ್ಟವರನ್ನು ವಿಚಾರಿಸಿ ಕ್ರಮ ಜರುಗಿಸುತ್ತೇನೆ ಎಂದು ಪತ್ರಿಕೆ ಕೇಳಿದ ಪ್ರಶ್ನೆಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin