ಬೆಂಗಳೂರು : ಕಾಲೇಜು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Crime--Girl

ಬೆಂಗಳೂರು, ಮಾ.20- ದ್ವಿಚಕ್ರ ವಾಹನದಲ್ಲಿ ಸ್ನೇಹಿತನೊಂದಿಗೆ ಬರುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ವೆಸಗಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾತ್ರಿ ಸ್ನೇಹಿತ ಸುಮಲ್ಯ ಗೌತಮ್ ಜತೆ 22 ವರ್ಷದ ವಿದ್ಯಾರ್ಥಿನಿ ಸರ್ವೀಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ವಿದ್ಯಾನಗರ ಕ್ರಾಸ್ ನಡುವೆ ಆ್ಯಕ್ಟೀವ್ ಹೋಂಡಾದಲ್ಲಿ ಎದುರಿನಿಂದ ಬಂದ ವ್ಯಕ್ತಿ ಇವರ ಬೈಕ್‍ಗೆ ಅಡ್ಡವಾಗಿ ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.

ಈ ವೇಳೆ ವಿದ್ಯಾರ್ಥಿನಿ ನೀವು ಏಕೆ ವಿರುದ್ಧ ದಿಕ್ಕಿನಿಂದ ಬಂದಿದ್ದೀರಿ ಎಂದು ಪ್ರಶ್ನಿಸಿದಾಗ ಆತ ಬೈಕ್‍ನಿಂದ ಇಳಿದು ಇವರ ವಾಹನದ ಕೀಯನ್ನು ಕಸಿದುಕೊಂಡು ನಿಂದಿಸುತ್ತಿದ್ದಾಗ ಆಟೋಚಾಲಕರು ಮತ್ತು 20ರಿಂದ 30 ಮಂದಿ ಸ್ಥಳೀಯರು ಜಮಾಯಿಸಿದ್ದರೂ ಇದನ್ನು ಲೆಕ್ಕಿಸದೆ ನನ್ನ ಮೈ-ಕೈ ಮುಟ್ಟಿ ಎಳೆದಾಡಿ ಕೆಳಕ್ಕೆ ತಳ್ಳಿದ್ದಲ್ಲದೆ, ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ವಿದ್ಯಾರ್ಥಿನಿ ಚಿಕ್ಕಜಾಲ ಪೊಲೀಸರಿಗೆ ದೂರು ನೀಡಿದ್ದಾಳೆ.  ನಂತರ ಸ್ಥಳೀಯರು ಜಗಳವನ್ನು ಬಿಡಿಸಿ ವಾಹನದ ಕೀಯನ್ನು ಇವರಿಗೆ ಕೊಡಿಸಿದಾಗ ವಿದ್ಯಾರ್ಥಿನಿ ಸ್ನೇಹಿತನ ಜತೆ ತೆರಳಿ ಚಿಕ್ಕಜಾಲ ಪೊಲೀಸರಿಗೆ ಘಟನೆ ಸಂಬಂಧ ದೂರು ನೀಡಿದ್ದಾಳೆ.  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin