ಭಾರತವು ಅಂತಾರಾಷ್ಟ್ರೀಯ ವಜ್ರ ವಹಿವಾಟು ತಾಣವಾಗಬೇಕು : ಮೋದಿ ಆಕಾಂಕ್ಷೆ
ನವದೆಹಲಿ/ಮುಂಬೈ, ಮಾ.20-ಭಾರತವು ಅಂತಾರಾಷ್ಟ್ರೀಯ ವಜ್ರ ವಹಿವಾಟು ತಾಣವಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ನಿನ್ನೆ ರಾತ್ರಿ ನಡೆದ ಅಂತಾರಾಷ್ಟ್ರೀಯ ವಜ್ರ ಸಮಾವೇಶದ ಚಾರಿಟಿ ಔತಣಕೂಟದಲ್ಲಿ ಭಾಗವಹಿಸಿದ್ದ ಉದ್ಯಮದ ಮಂದಿಯನ್ನು ಉದ್ದೇಶಿಸಿ ದೆಹಲಿಯಿಂದ ವಿಡಿಯೋ ಕಾನ್ಪೆರೆನ್ಸ್ ಮೂಲಕ ಮೋದಿ ಮಾತನಾಡಿದರು. ಭಾರತವು ಈಗ ವಜ್ರಗಳನ್ನು ಕತ್ತರಿಸಿ ಹೊಳಪು ನೀಡುವ ಕೇಂದ್ರವಾಗಿದ್ದು, ಇದರೊಂದಿಗೆ ವಿಶ್ವ ವಜ್ರ ವಹಿವಾಟು ತಾನವಾಗಿಸಬೇಕು. ಇದಕ್ಕಾಗಿ ಈ ಉದ್ಯಮದವರು ಶ್ರಮಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಕಳೆದ 50 ವರ್ಷಗಳ ಹಿಂದೆ ಭಾರತ ಹರಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ ಸ್ಥಾಪನೆಯಾದಾಗಿನಿಂದಲೂ ಭಾರತವು ಈ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಸಾಧಿಸಿದೆ. ದೇಶವು ಈಗ ವಜ್ರಗಳನ್ನು ಕತ್ತರಿಸುವ ಮತ್ತು ಹೊಳಪು ನೀಡುವ ವಿಶ್ವದ ಬೃಹತ್ ರಾಷ್ಟ್ರವಾಗಿದೆ. ಇದು ಇಲ್ಲಿಗೆ ನಿಲ್ಲದೇ ಡೈಮೆಂಡ್ ಟ್ರೇಡಿಂಗ್ನಲ್ಲೂ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವಹಿವಾಟು ತಾಣವಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS