15 ದಿನದೊಳಗೆ ಬಿಜೆಪಿಯ ಎಲ್ಲ ಮುಖಂಡರೂ ಆಸ್ತಿ ವಿವರ ಬಹಿರಗೊಳಿಸುವಂತೆ ಯೋಗಿ ತಾಕೀತು

ಈ ಸುದ್ದಿಯನ್ನು ಶೇರ್ ಮಾಡಿ

Yogi-Adityanath--01

ಲಕ್ನೋ, ಮಾ.20- ಬಿಜೆಪಿಯ ಎಲ್ಲ ಮುಖಂಡರೂ ಇನ್ನು 15 ದಿನಗಳ ಒಳಗೆ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಬೇಕೆಂದು ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಕೀತು ಮಾಡಿದ್ದಾರೆ. ಸಿಎಂ ಆದ ನಂತರ ಯೋಗಿ ಹೊರಡಿಸಿದ ಪ್ರಥಮ ಕಟ್ಟುನಿಟ್ಟಿನ ಆದೇಶ ಇದಾಗಿದೆ.
ಪ್ರಮಾಣವಚನ ಸ್ವೀಕರಿಸಿದ ಬಳಿಕ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಯಾವುದೇ ವಿವೇಚನಾರಹಿತ ಹೇಳಿಕೆಗಳನ್ನು ನೀಡದಂತೆಯೂ ಫರ್ಮಾನು ಹೊರಡಿಸಿದ್ದಾರೆ. ಉರಿನಾಲಿಗೆಯ ಪ್ರಖರ ಹಿಂದುತ್ವ ವಾದಿಯಾದ ಯೋಗಿ ನಿಷ್ಠುರ ನಡೆ-ನುಡಿಗೆ ಹೆಸರಾಗಿದ್ದು, ಈಗಾಗಲೇ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin