ಅನ್ನಭಾಗ್ಯ ಹೆಸರುಕಾಳಿನ ತೂಕದ ಗೋಲ್‍ಮಾಲ್ ಕುರಿತು ಪರಿಷತ್‍ನಲ್ಲಿ ಗಲಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Annabhagya--01

ಬೆಂಗಳೂರು, ಮಾ.21- ಸರ್ಕಾರ ವಿತರಿಸುತ್ತಿರುವ ಒಂದು ಕೆಜಿ ಹೆಸರುಕಾಳು ಪ್ಯಾಕೆಟ್‍ನಲ್ಲಿ ತೂಕದ ಗೋಲ್‍ಮಾಲ್ ನಡೆದಿರುವ ಬಗ್ಗೆ ವಿಧಾನಪರಿಷತ್‍ನಲ್ಲಿ ಚರ್ಚೆಗೆ ಗ್ರಾಸವಾಯಿತು. ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಈ ವಿಷಯ ಪ್ರಸ್ತಾಪಿಸಿ ಸರ್ಕಾರ ನೀಡುವ ಒಂದು ಕೆಜಿ ಹೆಸರುಕಾಳು ಪ್ಯಾಕೆಟ್‍ನಲ್ಲಿ 750ರಿಂದ 800 ಗ್ರಾಂ ತೂಕವಿದೆ. ಫಲಾನುಭವಿಗಳಿಗೆ 200 ಗ್ರಾಂ ಕಡಿಮೆಯಾಗಿದೆ. ಈ ಬಗ್ಗೆ ಪತ್ರಿಕೆ ಮತ್ತು ಸುದ್ದಿವಾಹಿನಿಗಳಲ್ಲಿ ರಾರಾಜಿಸುತ್ತಿದೆ. ಇದು ಸರ್ಕಾರದ ಬೇಜವಬ್ದಾರಿ ವರ್ತನೆ ಎಂದು ತರಾಟೆಗೆ ತೆಗೆದುಕೊಂಡರು.

ಇದರ ಬಗ್ಗೆ ಸರ್ಕಾರವನ್ನು ಕೇಳಿದರೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಸಚಿವರು ಹೇಳುತ್ತಿದ್ದಾರೆ. ಈ ರೀತಿ ಮಾಡುವುದಾದರೆ ಸರ್ಕಾರ ಏಕೆ ಈ ಯೋಜನೆಯನ್ನು ಜಾರಿಗೆ ತರಬೇಕೆಂದು ಪ್ರಶ್ನಿಸಿದರು.  ಒಂದು ಕೆಜಿನ ಹೆಸರುಕಾಳಿನ ಪ್ಯಾಕೆಟನ್ನು ಪ್ರಾಣೇಶ್ ಸಭೆಯಲ್ಲಿ ಪ್ರದರ್ಶಿಸಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.  ಇದಕ್ಕೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಈ ಬಗ್ಗೆ ಪರಿಶೀಲನೆ ನಡೆಸಿ ಗೋದಾಮಿನಲ್ಲಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin