ಅಮೆರಿಕ ಉನ್ನತ ನ್ಯಾಯಾಂಗ ಹುದ್ದೆಗೆ ಭಾರತೀಯ ಮೂಲದ ಥಾಪೂರ್’ರನ್ನು ನೇಮಿಸಿದ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Amul-Thapar

ವಾಷಿಂಗ್ಟನ್, ಮಾ.21– ಅಮೆರಿಕ ಪ್ರಬಲ ಮೇಲ್ಮನವಿ ನ್ಯಾಯಾಲಯವೊಂದರ ಪ್ರಮುಖ ಹುದ್ದೆಗೆ ಭಾರತೀಯ ಮೂಲದ ಅಮೆರಿಕದ ಖ್ಯಾತ ಕಾನೂನು ತಜ್ಞರೊಬ್ಬರನ್ನು ಅಧ್ಯಕ್ಷ ಡೊನಾಲ್ಡ ಟ್ರಂಪ್ ನಾಮನಿರ್ದೇಶನ ಮಾಡಿದ್ದಾರೆ.  ಅಮೂಲ್ ಥಾಪೂರ್(47) ನ್ಯಾಯಾಂಗದ ಪ್ರಮುಖ ಹುದ್ದೆಗೆ ನಾಮನಿರ್ದೇಶನಗೊಂಡಿರುವ ಭಾರತ ಮೂಲದವರು. ಟ್ರಂಪ್ ನಿನ್ನೆ ಬಿಡುಗಡೆ ಮಾಡಿದ ಸುಪ್ರೀಂಕೋರ್ಟ್‍ನ 20 ಪ್ರಮುಖ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ಇವರು ಒಬ್ಬರು ಕೂಡ. ಥಾಪೂರ್ 2002ರಲ್ಲಿ ಅಮೆರಿಕದ ಕೆಂಟುಕಿಯ ಪೂರ್ವ ಜಿಲ್ಲಾ ನ್ಯಾಯಾಲಯಕ್ಕೆ ದಕ್ಷಿಣ ಏಷ್ಯಾದ ಮೂರನೇ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು. ಈಗ ಅಮೆರಿಕದ 6ನೇ ಪ್ರಮುಖ ನ್ಯಾಯಾಲಯದಲ್ಲಿ ಕಾನೂನು ಪ್ರತಿಭಾಶಾಲಿ ಹುದ್ದೆ ನಿರ್ವಹಿಸಲು ಸೆನೆಟ್ ಖಚಿತ ಪಡಿಸಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin