ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ ( 21-03-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಜ್ಜನರ ಸಹವಾಸದಲ್ಲಿ ಆಸೆ, ಪರರ ಗುಣಗಳಲ್ಲಿ ಪ್ರೀತಿ, ಗುರುವಿನಲ್ಲಿ ವಿಧೇಯತೆ, ವಿದ್ಯೆಯಲ್ಲಿ ಆಸಕ್ತಿ, ತನ್ನ ಹೆಂಡತಿಯಲ್ಲಿ ಸುಖ ಪಡುವಿಕೆ, ಲೋಕಾಪವಾದ ದೆಸೆಯಿಂದ ಹೆದರಿಕೆ, ಶಿವನಲ್ಲಿ ಭಕ್ತಿ, ಮನಸ್ಸನ್ನು ನಿಗ್ರಹಿಸುವುದರಲ್ಲಿ ಶಕ್ತಿ, ದುರ್ಜನರೊಡನೆ ಸಹವಾಸ ತ್ಯಾಗ- ಈ ನಿರ್ಮಲ ಗುಣಗಳು ಯಾರಲ್ಲಿವೆಯೋ ಆ ಮಹಾತ್ಮರಿಗೆ ನಮಸ್ಕಾರ. – ನೀತಿಶತಕ

Rashi

ಪಂಚಾಂಗ : 21.03.2017, ಮಂಗಳವಾರ

ಸೂರ್ಯ ಉದಯ ಬೆ.06.23 / ಸೂರ್ಯ ಅಸ್ತ  ಸಂ.06.31
ಚಂದ್ರ ಅಸ್ತ ಮ.12.38 / ಚಂದ್ರ ಉದಯ ರಾ.01.41
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಕೃಷ್ಣ ಪಕ್ಷ / ತಿಥಿ : ಅಷ್ಟಮಿ (ಬೆ.10.39) / ನಕ್ಷತ್ರ: ಮೂಲಾ  (ಬೆ.11.51)
ಯೋಗ: ವರಿಯಾನ್  (ನಾ.ಬೆ.06.00) / ಕರಣ: ಕೌಲವ-ತೈತಿಲ  (ಬೆ.10.32-ರಾ.11.29)
ಮಳೆ ನಕ್ಷತ್ರ: ಉತ್ತರಾಭಾದ್ರ / ಮಾಸ: ಮೀನ / ತೇದಿ: 08

ರಾಶಿ ಭವಿಷ್ಯ :

ಮೇಷ : ದೂರ ಸಂಚಾರದಲ್ಲಿ ಜಾಗ್ರತೆ ಇರಲಿ, ಆರ್ಥಿಕವಾಗಿ ಏರುಪೇರು ಕಂಡುಬರಲಿದೆ
ವೃಷಭ : ಆಪ್ತರ ಹಿತವಚನ, ಸಲಹೆಗಳನ್ನು ಅಲಕ್ಷಿಸದಿರಿ
ಮಿಥುನ: ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಪ್ರಗತಿ
ಕಟಕ : ಅನಿರೀಕ್ಷಿತ ತೀರ್ಥಕ್ಷೇತ್ರ ಭಾಗ್ಯ ಒದಗಿಬರಲಿದೆ
ಸಿಂಹ: ಆಗಾಗ ದೇಹಾರೋಗ್ಯ ದಲ್ಲಿ ಏರುಪೇರು ಕಂಡುಬರಲಿದೆ
ಕನ್ಯಾ: ಆರ್ಥಿಕವಾಗಿ ನಾನಾ ರೀತಿ ಯಲ್ಲಿ ಖರ್ಚು-ವೆಚ್ಚಗಳು ಬರಲಿವೆ
ತುಲಾ: ವಿದ್ಯಾರ್ಥಿಗಳಿಗೆ ಅಭ್ಯಾಸ ದಲ್ಲಿ ನಿರುತ್ಸಾಹ ತೋರಿಬರುತ್ತದೆ
ವೃಶ್ಚಿಕ : ಕೆಲಸ-ಕಾರ್ಯಗಳಲ್ಲಿ ಹೆಚ್ಚಿನ ಅಡಚಣೆ ಇರುತ್ತದೆ
ಧನುಸ್ಸು: ಕಾರ್ಮಿಕ ವರ್ಗದವರ ಸಮಸ್ಯೆ ಆಗಾಗ ಕಿರಿಕಿರಿ ತರಲಿದೆ, ನಂಬಿದವರೇ ವಂಚನೆ ಮಾಡುವರು
ಮಕರ: ಮಂಗಳ ಕಾರ್ಯಗಳು, ದೇವತಾ ಕಾರ್ಯ ಗಳಿಗಾಗಿ ಹೆಚ್ಚು ಧನ ವಿನಿಯೋಗ ಮಾಡುವಿರಿ
ಕುಂಭ: ವ್ಯಾಪಾರ-ವ್ಯವಹಾರಗಳನ್ನು ಜಾಗ್ರತೆಯಿಂದ ನಡೆಸಿಕೊಂಡು ಹೋಗಬೇಕು, ಮಕ್ಕಳ ಬಗ್ಗೆ ಚಿಂತೆ ಕಾಡಲಿದೆ
ಮೀನ: ಯೋಗ್ಯ ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಲಿದೆ, ರಾಜಕೀಯ ವಲಯದಲ್ಲಿ ಶತ್ರುಗಳ ಪಿತೂರಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin