ಇಂದು ಪ್ರತಿಭಟನೆಗಳ ತಾಣವಾಗಿತ್ತು ರಾಜಧಾನಿ ಬೆಂಗಳೂರು

ಈ ಸುದ್ದಿಯನ್ನು ಶೇರ್ ಮಾಡಿ

Protest--01

ಬೆಂಗಳೂರು, ಮಾ.21- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಲ್ಕು ಸಂಘಟನೆಗಳು ಫ್ರೀಡಂ ಪಾರ್ಕ್‍ನಲ್ಲಿ ಇಂದು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಅಂಗನವಾಡಿ ಕಾರ್ಯ ಕರ್ತೆಯರು ಅಹೋರಾತ್ರಿ ಪ್ರತಿಭಟನೆ ನಡೆಸಿ ರಾಜ್ಯದ ಗಮನ ಸೆಳೆದಿದ್ದಲ್ಲದೆ, ರಸ್ತೆಯುದ್ದಕ್ಕೂ ಮಲಗಿ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದರು.  ಅಂಗನವಾಡಿ ಕಾರ್ಯ ಕರ್ತೆಯರು, ಅಗ್ರಿಗೋಲ್ಡ್‍ನಿಂದ ವಂಚನೆಗೆ ಒಳಗಾದವರು, ಅತಿಥಿ ಉಪನ್ಯಾಸಕ ರನ್ನು ಖಾಯಂ ಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದವು.

ಮತ್ತೊಂದು ಕಡೆ ನಡೆದ ಪ್ರತಿಭಟನೆಯಲ್ಲಿ ಅಗ್ರಿಗೋಲ್ಡ್ ಸಂಸ್ಥೆಯಿಂದ ವಂಚನೆಗೆ ಒಳಗಾದವರು ನ್ಯಾಯಕ್ಕಾಗಿ ನಿನ್ನೆ ಗಾಳಿ ಆಂಜನೇಯ ದೇವಸ್ಥಾನದಿಂದ ಫ್ರೀಡಂ ಪಾರ್ಕ್‍ವರೆಗೂ ರ್ಯಾಲಿ ನಡೆಸಿ, ಇಂದು ಕೂಡ ಪ್ರತಿಭಟನೆ ಮುಂದುವರೆಸಿದ್ದಾರೆ.  ಇದುವರೆಗೂ ವಂಚನೆ ಕುರಿತು ಸಿಐಡಿ ತನಿಖೆ ಮಾತ್ರ ನಡೆಸಿದ್ದು, ಅಗ್ರಿಗೋಲ್ಡ್ ಮಾಲೀಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ವಂಚನೆಗೆ ಒಳಗಾದ ಗ್ರಾಹಕರಿಗೆ ಹಣ ಕೊಡಿಸಬೇಕೆಂದು ಶಿಫಾರಸ್ಸು ಆಗಿದೆ. ಆದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಏಜೆಂಟರುಗಳು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಸುಮಾರು 2 ಸಾವಿರ ಕೋಟಿ ರೂ. ವಂಚನೆ ನಡೆದಿದೆ. ಬಡವರ ಹಣವನ್ನು ಬೇರೆಡೆ ಸಾಗಿಸಿದ್ದಾರೆ. ಲೈಸೆನ್ಸ್ ನೀಡಿದ ಅಧಿಕಾರಿಗಳು ಈಗ ಸುಮ್ಮನೆ ಕುಳಿತಿದ್ದಾರೆ. ಸುಮಾರು 42 ಲಕ್ಷ ಕುಟುಂಬ ಇದರಿಂದ ವಂಚನೆಗೆ ಒಳಗಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.  ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು ಇದರ ತನಿಖೆ ನಡೆಯಬೇಕು ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸಬೇಕು ಎಂದು ಒತ್ತಾಯಿಸಿ ಮಾ.17ರಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಗ್ರಾಪಂ ನೌಕರರು ಸಹ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿವೆ. ಒಟ್ಟಾರೆ ಇಡೀ ಪ್ರದೇಶವೇ ಧರಣಿಗಳಲ್ಲಿ ಮುಳುಗಿ ಹೋಗಿದೆ. ಸ್ಥಳಕ್ಕೆ ಬಿಜೆಪಿ ನಾಯಕರಾದ ಸಿ.ಟಿ.ರವಿ, ಎಂಎಲ್‍ಸಿ ಹಾಲಪ್ಪ ಆಚಾರ್ ಮತ್ತಿತರರು ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin