ಖ್ಯಾತ ಹಿರಿಯ ವಕೀಲ ಅನಿಲ್ ದಿವಾನ್ ಅವರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

Session-02

ಬೆಂಗಳೂರು, ಮಾ.21- ಖ್ಯಾತ ಹಿರಿಯ ವಕೀಲ ಹಾಗೂ ಸಂವಿಧಾನ ತಜ್ಞ ಅನಿಲ್ ಬಿ.ದಿವಾನ್ ಅವರ ನಿಧನಕ್ಕೆ ವಿಧಾನಸಭೆಯಲ್ಲಿಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು, ನಿನ್ನೆ ಅನಿಲ್ ದಿವಾನ್ ಅವರು ನಿಧನರಾಗಿರುವ ಬಗ್ಗೆ ಮಾಹಿತಿ ನೀಡಿದರು. ಕಾವೇರಿ, ಕೃಷ್ಣ ನದಿ ವಿವಾದಗಳಲ್ಲಿ ಕರ್ನಾಟಕದ ಪರ ಸುಪ್ರೀಂಕೋರ್ಟ್‍ನಲ್ಲಿ ವಕಾಲತ್ತು ವಹಿಸಿದ್ದ ದಿವಾನ್ ಅವರು ಲಾ ಏಷಿಯಾದ ಅಧ್ಯಕ್ಷರಾಗಿ, ಬಾರ್ ಅಸೋಷಿಯೇಶನ್ ಆಫ್ ಇಂಡಿಯಾ ಅಧ್ಯಕ್ಷರಾಗಿ, ಇಂಟರ್ ನ್ಯಾಷನಲ್ ಲಾ ಅಸೋಷಿಯೇಶನ್‍ನ ಜಲಸಂಪನ್ಮೂಲ ಕಾನೂನು ಕುರಿತ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ದಿವಾನ್ ಅವರ ನಿಧನದಿಂದ ರಾಜ್ಯ ಹಿರಿಯ ಕಾನೂನು ತಜ್ಞರೊಬ್ಬರನ್ನು ಕಳೆದುಕೊಂಡತಾಗಿದೆ ಎಂದು ವಿಷಾದಿಸಿದರು.  ನಂತರ ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin