ತುರ್ತು ಭಾಸ್ಪರ್ಶದ ವೇಳೆ ಸ್ಪೋಟಗೊಂಡ ವಿಮಾನ : 49 ಮಂದಿಗೆ ಗಂಭೀರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Plane-Crash--01
ಜುಬಾ,ಮಾ.21-ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪ್ರತಿಕೂಲ ಹವಾಮಾನದಿಂದಾಗಿ ತುರ್ತು ಭೂ ಸ್ಪರ್ಶ ಮಾಡಿದ ಬೆನ್ನಲ್ಲೇ ಸ್ಪೋಟಗೊಂಡಿದ್ದು 49 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ದಕ್ಷಿಣ ಸೂಡಾನ್‍ನಲ್ಲಿ ನಡೆದಿದೆ. ಪ್ರತಿಕೂಲ ಹವಾಮಾನದಿಂದ ಪೈಲೆಟ್‍ಗೆ ರನ್‍ವೇ ಕಾಣದೆ ವಾಯುವ್ಯ ಭಾಗದ ವಾವು ಎಂಬಲ್ಲಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದ ಎಂದು ವಾವು ಏರ್‍ಪೋರ್ಟ್‍ನ ಎಂಜಿನಿಯರ್ ತಿಳಿಸಿದ್ದಾರೆ.
ನಂತರ ಕೆಲವೇ ಕ್ಷಣಗಳಲ್ಲಿ ವಿಮಾನ ಸ್ಪೋಟಗೊಂಡಿದ್ದು, ಇದರಿಂದ ಗಾಯಗೊಂಡ ಪ್ರಯಾಣಿಕರನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದು ಆಸ್ಪೆತ್ರಗೆ ದಾಖಲಿಸಿದ್ದಾರೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin