ನಂಜನಗೂರು ಉಪಚುನಾವಣೆ ಸ್ವಾಭಿಮಾನ ಮತ್ತು ಅಹಂ ನಡುವಿನ ಹೋರಾಟ : ಪ್ರಸಾದ್

ಈ ಸುದ್ದಿಯನ್ನು ಶೇರ್ ಮಾಡಿ

Srinivas-Prasad-and-Siddara

ನಂಜನಗೂಡು, ಮಾ.21- ಈ ಚುನಾವಣೆ ಸ್ವಾಭಿಮಾನ ಮತ್ತು ಅಹಂ ನಡುವಿನ ಹೋರಾಟವಾಗಿದ್ದು, ಗೆಲುವು ಯಾರಿಗೆ ಎಂಬುದನ್ನು ಪ್ರಜ್ಞಾವಂತ ಮತದಾರರು ತೀರ್ಮಾನಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆ ನನಗೆ ಪ್ರತಿಷ್ಠೆಯಾಗಿದ್ದು, ಇಡೀ ಮಂತ್ರಿಮಂಡಲವೇ ಚುನಾವಣಾ ಪ್ರಚಾರಕ್ಕೆ ಬಂದರೂ ಅವರ ತಂತ್ರ, ಪ್ರತಿತಂತ್ರ, ಮಾಟ, ಮಾಯೆಗಳಿಗೆ ಮತದಾರರು ಬೆಲೆ ಕೊಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.  ನಂಜನಗೂಡಿನಲ್ಲಿ ವಿ.ಶ್ರೀನಿವಾಸ ಪ್ರಸಾದ್ ಜನರ ವಿಶ್ವಾಸಗಳಿಸಿದ್ದಾರೆ. ಇವರ ಮೇಲೆ ಕ್ಷೇತ್ರದ ಜನತೆಯ ಅನುಕಂಪವಿದೆ. ಗುಂಡ್ಲುಪೇಟೆಯಲ್ಲಿ ಯುವಕನಾಗಿರುವ ನಿರಂಜನ್ ಕುಮಾರ್ ಮೇಲೆ ಅನುಕಂಪವಿದೆ 2 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಜಯಬೇರಿ ಭಾರಿಸಲಿದ್ದಾರೆ ಎಂದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ, ಮಾಜಿ ಸಚಿವರಾದ ವಿ.ಸೋಮಣ್ಣ, ಸುರೇಶ್‍ಕುಮಾರ್, ಎಸ್.ಎ.ರಾಮದಾಸ್, ಬಿ.ಸೋಮಶೇಖರ್, ಕುಮಾರ ಬಂಗಾರಪ್ಪ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೃಹತ್ ರೋಡ್ ಶೋ ನಡೆಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin