ಭಾರತದಲ್ಲಿ 63 ದಶಲಕ್ಷ ಮಂದಿಗೆ ಶುದ್ಧ ಕುಡಿಯುವ ನೀರೇ ಲಭಿಸುತ್ತಿಲ್ಲ…!

ಈ ಸುದ್ದಿಯನ್ನು ಶೇರ್ ಮಾಡಿ

Drinking-Water--01

ಕೊಚ್ಚಿ, ಮಾ.21-ಭಾರತದ ಗರಿಷ್ಠ ಸಂಖ್ಯೆಯ ಜನರು ಅಂದರೆ 63 ದಶಲಕ್ಷ ಮಂದಿಗೆ ಶುದ್ಧ ನೀರೇ ಲಭಿಸುತ್ತಿಲ್ಲ..! ನಾಳೆ ಆಚರಿಸಲಾಗುವ ವಿಶ್ವ ಜಲ ದಿನದ ಅಂಗವಾಗಿ ಬಿಡುಗಡೆ ಮಾಡಲಾದ ಹೊಸ ಜಾಗತಿಕ ವರದಿಯೊಂದರಲ್ಲಿ ಈ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ.   ಬ್ರಿಟನ್‍ನ ಜನಸಂಖ್ಯೆಯಷ್ಟು ಮಂದಿಗೆ ಭಾರತದಲ್ಲಿ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ ಎಂದು ವೈಲ್ಡ್ ವಾಟರ್ ಸಂಸ್ಥೆಯು ವಿಶ್ವ ಜಲ ಸ್ಥಿತಿ-ಗತಿ ಕುರಿತು ಬಿಡುಗಡೆಗೊಳಿಸಿರುವ ವರದಿಯಲ್ಲಿ ತಿಳಿಸಿದೆ.

ಸರ್ಕಾರದ ಯೋಜನೆ ಕೊರತೆ, ತೀವ್ರ ಬೇಡಿಕೆ, ಹೆಚ್ಚುತ್ತಿರುವ ಜನಸಂಖ್ಯೆ, ಮತ್ತು ನೀರು ಕಾಲುವೆ ಕೃಷಿ ವಿಧಾನ-ಇವುಗಳಿಂದ ಜಲ ಸಂಪನ್ಮೂಲದ ಮೇಲೆ ತೀವ್ರ ಒತ್ತಡ ಉಂಟಾಗುತ್ತಿದೆ ಎಂದು ವಾಟರ್ ಏಡ್ ರಿಪೋಟ್ ಹೆಸರಿನ ವರದಿಯಲ್ಲಿ ವಿವರಿಸಲಾಗಿದೆ.   ಶುದ್ಧ ನೀರು ಲಭಿಸದಿರುವ 63 ದಶಲಕ್ಷ ಜನರಲ್ಲಿ ಬಹುತೇಕ ಮಂದಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಕಾಲರಾ, ಅಂಧತ್ವಕ್ಕೆ ಕಾರಣವಾಗುವ ಟ್ರಾಕೋಮಾ, ಮಲೇರಿಯಾ ಮತ್ತು ಡೆಂಘಿಯಂಥ ರೋಗಗಳು ಮತ್ತು ಅಪೌಷ್ಠಿಕತೆ ಸಮಸ್ಯೆಗಳು ಈ ಮಂದಿಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin