ಮೇಕೆ ಕದಿಯಲು ಬಂದ ಕಳ್ಳನನ್ನು ಕಂಬಕ್ಕೆ ಕಟ್ಟಿಹಾಕಿ ಹೊಡೆದು ಕೊಂದ ಗ್ರಾಮಸ್ಥರು..!

ಈ ಸುದ್ದಿಯನ್ನು ಶೇರ್ ಮಾಡಿ

Tumakuru--01

ಮಧುಗಿರಿ, ಮಾ.21- ಮೇಕೆ ಕದಿಯಲು ಬಂದ ಕಳ್ಳನನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಮನಸೋ ಇಚ್ಚೆ ಥಳಿಸಿ ಕೊಲೆ ಮಾಡಿರುವ ಘಟನೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಕೊಲೆಯಾದ ವ್ಯಕ್ತಿಯನ್ನು ಆಂಧ್ರ ಪ್ರದೇಶದ ಮೂಲದವನೆಂದು ಹೇಳಲಾಗಿದ್ದು, ಹೆಸರು, ವಿಳಾಸ ತಿಳಿದು ಬಂದಿಲ್ಲ.  ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ದೊಡ್ಡಮಾಲೂರು ನಿವಾಸಿ ರಾಮರೆಡ್ಡಿ ಎಂಬುವರು ಸುಮಾರು 25ರಿಂದ 30 ಮೇಕೆಗಳನ್ನು ಸಾಕಿದ್ದಾರೆ. ಮಧ್ಯರಾತ್ರಿ ಆಂಧ್ರಪ್ರದೇಶ ಮೂಲದ ನಾಲ್ವರು ಕಳ್ಳರು ಇವರ ಮನೆ ಬಳಿ ಬಂದು ನಾಲ್ಕು ಮೇಕೆಗಳನ್ನು ಕದ್ದೊಯ್ಯುತ್ತಿದ್ದಾಗ ನಾಯಿಗಳು ಬೊಗಳಲಾರಂಭಿಸಿವೆ.

ನಾಯಿಗಳು ಬೊಗಳುತ್ತಿದ್ದ ಶಬ್ಧಕ್ಕೆ ಎಚ್ಚರಗೊಂಡ ಗ್ರಾಮಸ್ಥರು ಹಾಗೂ ರಾಮರೆಡ್ಡಿ ಹೊರಗೆ ಬಂದು ನೋಡಿದಾಗ ಮೇಕೆಗಳನ್ನು ಕಳ್ಳರು ಕದ್ದೊಯ್ಯುತ್ತಿರುವುದನ್ನು ಕಂಡು ಒಟ್ಟಾಗಿ ಅವರನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಮೂವರು ಕಳ್ಳರು ಮೇಕೆಗಳನ್ನು ಬಿಟ್ಟು ಪರಾರಿಯಾಗಿದ್ದು, ಒಬ್ಬಾತ ಗ್ರಾಮಸ್ಥರ ಕೈಗೆ  ಸಿಕ್ಕಿಬಿದ್ದಿದ್ದಾನೆ. ಈತನನ್ನು ಕಂಬಕ್ಕೆ ಕಟ್ಟಿದ ಗ್ರಾಮಸ್ಥರು ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದರಿಂದ ಆತ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಕೊಡಿಗೇನಹಳ್ಳಿ ಸಬ್‍ಇನ್ಸ್‍ಪೆಕ್ಟರ್ ಮೋಹನ್‍ಕುಮಾರ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದು ಘಟನೆ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಕೊಡುಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin