ರಾಜ್ಯದಲ್ಲಿ ಮೊದಲ ಬಾರಿಗೆ ಗುಪ್ತಚರ ಘಟಕದಲ್ಲಿ ವಿಶೇಷ ಪ್ರತ್ಯೇಕ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-Session--01

ಬೆಂಗಳೂರು, ಮಾ.21- ರಾಜ್ಯದಲ್ಲಿ ಮೊದಲ ಬಾರಿಗೆ ಗುಪ್ತಚರ ಘಟಕದಲ್ಲಿ ವಿಶೇಷ ಪ್ರತ್ಯೇಕ ನೇಮಕಾತಿಯನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು.  ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ವೈ.ಎ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡಲು ಗುಪ್ತಚರ ಇಲಾಖೆ ಅಗತ್ಯವಿದ್ದು, ಹೆಚ್ಚು ದಕ್ಷತೆಯಿಂದ ಕೆಲಸ ಮಾಡಬೇಕು. ಹಾಗಾಗಿ ಪ್ರತ್ಯೇಕ ನೇಮಕಾತಿ ಆರಂಭಿಸಲಾಗಿದೆ ಎಂದರು.

ರಾಜ್ಯ ಗುಪ್ತವಾರ್ತೆ ಘಟಕದಲ್ಲಿ 1286 ವಿವಿಧ ಹುದ್ದೆಗಳು ಮುಂಜೂರಾಗಿದ್ದ 812 ಹುದ್ದೆಗಳು ಭರ್ತಿಯಾಗಿವೆ. 974 ಹುದ್ದೆಗಳು ಭರ್ತಿಯಾಗಬೇಕು ಎಂದರು.
ಮಂಜೂರಾದ ಲಿಪಿಕ ಸಿಬ್ಬಂದಿಗಳ ಸಂಖ್ಯೆ 297 ಇದ್ದು, 140 ಹುದ್ದೆಗಳು ಭರ್ತಿಯಾಗಿದ್ದು, ಇನ್ನು 67 ಹುದ್ದೆಗಳು ಖಾಲಿ ಇವೆ. ಹುದ್ದೆಗಳು ಖಾಲಿ ಇದ್ದರೂ ಅವಶ್ಯಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.  ಈಗಾಗಲೇ 41 ಪಿಎಸ್‍ಐ ಹುದ್ದೆಗಳು ಭರ್ತಿಯಾಗಿದ್ದು, ಸಂದರ್ಶನ ಮಾತ್ರ ಬಾಕಿ ಉಳಿದಿದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin