16 ಕುರಿಗಳನ್ನು ಕದ್ದೊಯ್ದ ಕಳ್ಳರು : ಕಂಗಾಲಾದ ರೈತ

ಈ ಸುದ್ದಿಯನ್ನು ಶೇರ್ ಮಾಡಿ

Former--01

ಮಂಡ್ಯ, ಮಾ.21- ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ 16 ಕುರಿಗಳನ್ನು ಚೋರರು ಕದ್ದೊಯ್ದಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕುರಿ ಸಾಕಾಣಿಕೆಯ ಉಪಕಸುಬು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹುಣಸನಹಳ್ಳಿಯ ಕೆಂಪಲಿಂಗೇಗೌಡ ಎಂದಿನಂತೆ ಕುರಿ ಮೇಯಿಸಿಕೊಂಡು ಬಂದು ನಿನ್ನೆ ರಾತ್ರಿ ಕೊಟ್ಟಿಗೆಗೆ ಕೂಡಿ ಹಾಕಿ ಸುಮಾರು 200 ಮೀಟರ್ ದೂರದಲ್ಲಿದ್ದ ತಮ್ಮ ಮನೆಯಲ್ಲಿ ಮಲಗಿದ್ದಾರೆ. ಈ ವೇಳೆ ಕಳ್ಳರು 16 ಕುರಿಗಳನ್ನು ಕದ್ದೊಯ್ದಿದ್ದಾರೆ. ಬೆಳಗ್ಗೆ ಕೊಟ್ಟಿಗೆಗೆ ಹೋಗಿ ನೋಡಿದಾಗ 16 ಕುರಿಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ 16ಬಂಡೂರಿ ಕುರಿಗಳು ಶ್ರೇಷ್ಠ ತಳಿಯದ್ದಾಗಿದ್ದು, ಲಕ್ಷಾಂತರ ರೂ.ನಷ್ಟು ನಷ್ಟ್ಟ ಉಂಟಾಗಿರುವುದಾಗಿ ರೈತ ಕೆಂಪಲಿಂಗೇಗೌಡ ತಿಳಿಸಿದ್ದಾರೆ.  ತಡರಾತ್ರಿಯಲ್ಲಿ ಕಳ್ಳರು ವ್ಯಾನ್‍ನಲ್ಲಿ ಕುರಿಗಳನ್ನು ತುಂಬಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದ್ದು, ಈ ಸಂಬಂಧ ಅರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin