2020ರ ವೇಳೆಗೆ 6000 ಮೆಗಾವ್ಯಾಟ್ ಸೌರ ವಿದ್ಯುತ್ ಲಭ್ಯವಾಗಲಿದೆ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

DKShivakumar--v01

ಬೆಂಗಳೂರು, ಮಾ.21- ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ನಿರ್ಮಾಣ ಮಾಡುತ್ತಿರುವ ದೇಶದಲ್ಲೇ ಅತಿ ದೊಡ್ಡ ಸೌರವಿದ್ಯುತ್ ಪಾರ್ಕ್‍ನಿಂದ 2020ರ ವೇಳೆಗೆ ಒಟ್ಟು 6000 ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಧಾನಪರಿಷತ್‍ನಲ್ಲಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯೆ ತಾರಾ ಅನುರಾಧ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಫೆಬ್ರುವರಿ ಅಂತ್ಯಕ್ಕೆ 550.05 ಮೆಗಾವ್ಯಾಟ್ ಸಾಮಥ್ರ್ಯದ ಸೌರವಿದ್ಯುತ್ ಯೋಜನೆ ಅನುಷ್ಠಾನವಾಗಿದೆ. 2018-19ನೇ ಸಾಲಿಗೆ ಹೆಚ್ಚುವರಿಯಾಗಿ ಒಂದು ಸಾವಿರ ಮೆಗಾವ್ಯಾಟ್ ಸೇರಿದಂತೆ 2020ಕ್ಕೆ 6ಸಾವಿರ ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ. ಇದರಿಂದ ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಎಸ್‍ಪಿಡಿಸಿಎಲ್ ಸಂಸ್ಥೆ ಪಾವಗಡದಲ್ಲಿ ನಿರ್ಮಾಣ ಮಾಡುತ್ತಿರುವ ಸೌರವಿದ್ಯುತ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಚಿಂತನೆ ನಡೆದಿದೆ. ಕರ್ನಾಟಕದ ಮಾದರಿಯನ್ನು ದೇಶದ ಇತರೆ ರಾಜ್ಯಗಳು ಅನುಸರಿಸಬೇಕೆಂದು ಮನವಿ ಮಾಡಿರುವುದಾಗಿ ಹೇಳಿದರು.  ರಾಜ್ಯದಲ್ಲಿ ಸೌರವಿದ್ಯುತ್ ಉತ್ಪಾದನೆ ಜನಪ್ರಿಯಗೊಳಿಸಲು ರಾಜ್ಯ ಸರ್ಕಾರ 2014ರಲ್ಲಿ ಸೌರ ನೀತಿ ಜಾರಿ ಮಾಡಿದೆ. ಈಗಾಗಲೇ 6178 ಮೆಗಾವ್ಯಾಟ್ ವಿದ್ಯುತ್‍ನ ಸೋಲಾರ್ ಘಟಕಗಳನ್ನು ಹಂಚಿಕೆ ಮಾಡಲಾಗಿದೆ. ಪಾವಗಡದಲ್ಲೇ 2ಸಾವಿರ ಸೌರ ಪಾರ್ಕ್ ಹಂಚಿಕೆ ಮಾಡಲಾಗಿದೆ. ಎನ್‍ಟಿಪಿಸಿ ವತಿಯಿಂದ 600 ಮೆಗಾವ್ಯಾಟ್, ಎನ್‍ಟಿಪಿಸಿವತಿಯಿಂದ 1ಸಾವಿರ, ಎಸ್‍ಸಿಐನಿಂದ 200, ಕೆಆರ್‍ಇಡಿಎಲ್‍ನಿಂದ 200 ಮೆಗಾವ್ಯಾಟ್ ವಿದ್ಯುತ್ ತಯಾರು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin