ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-03-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಆಸೆಗಳಿಗೊಳಗಾದವರಿಗೆ ಕಾಡಿನಲ್ಲಿದ್ದರೂ ದೋಷಗಳು ಬಿಡುವುದಿಲ್ಲ. ಗೃಹಸ್ಥನಾಗಿದ್ದರೂ ಐದು ಇಂದ್ರಿಯಗಳನ್ನು ಜಯಿಸುವುದೇ ತಪಸ್ಸು. ಹೇಯವಲ್ಲದ ಕೆಲಸಗಳಲ್ಲಿ ತೊಡಗುವವನೂ, ಆಸೆಯನ್ನು ಬಿಟ್ಟವನೂ ಆದವನಿಗೆ ಮನೆಯೇ ತಪೋವನ.  – ಹಿತೋಪದೇಶ, ಸಂಧಿ

Rashi

ಪಂಚಾಂಗ : ಬುಧವಾರ ,22.03.2017

ಸೂರ್ಯ ಉದಯ ಬೆ.06.23 / ಸೂರ್ಯ ಅಸ್ತ ಸಂ.06.31
ಚಂದ್ರ ಅಸ್ತ ಮ.01.28 / ಚಂದ್ರ ಉದಯ ರಾ.02.29
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು
ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ : ನವಮಿ (ಮ.12.18)
ನಕ್ಷತ್ರ: ಪೂರ್ವಾಷಾಢ (ಮ.02.07) / ಯೋಗ: ಪರಿಘ (ರಾ.05.59)
ಕರಣ: ಗರಜೆ-ವಣಿಜ್ / (ಮ.12.18-ರಾ.12.58)
ಮಳೆ ನಕ್ಷತ್ರ: ಉತ್ತರಾಭಾದ್ರ / ಮಾಸ: ಮೀನ / ತೇದಿ: 09

ರಾಶಿ ಭವಿಷ್ಯ :

ಮೇಷ : ಸಲಕರಣೆಗಳ ಅಭಾವದಿಂದ ಪ್ರಗತಿ ಕುಂಠಿತವಾಗಲಿದೆ, ಕಫ, ವಾಯು ದೋಷದಿಂದಾಗಿ ಆರೋಗ್ಯ ಕೆಡಬಹುದು
ವೃಷಭ : ವಿದ್ಯಾರ್ಥಿಗಳು ವಿದ್ಯೆಯಲ್ಲಿ ಮೇಲುಗೈ ಸಾಧಿಸುವರು
ಮಿಥುನ: ವಾಹನಗಳ ರಿಪೇರಿಗಾಗಿ ಖರ್ಚು ಮಾಡುವಿರಿ
ಕಟಕ : ಸಾಂಸಾರಿಕ ಉತ್ತಮವಿದ್ದರೂ ಕಿರಿಕಿರಿ ತಪ್ಪದು
ಸಿಂಹ: ರಾಜಕೀಯ ವಲಯದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ
ಕನ್ಯಾ: ಮನೆಯಲ್ಲಿ ಹೊಸ ಸದಸ್ಯರ ಆಗಮನದಿಂದ ಸಂತಸ
ತುಲಾ: ವೃತ್ತಿರಂಗದಲ್ಲಿ ಕಾರ್ಯ ವೈಖರಿಗೆ ಶ್ಲಾಘನೆ ದೊರೆಯಲಿದೆ
ವೃಶ್ಚಿಕ : ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ ದೊರೆಯಲಿದೆ
ಧನುಸ್ಸು: ಧರ್ಮ ಪ್ರವೃತ್ತಿಯಿಂದ ಶುಭಕಾರ್ಯಗಳು ನೆರವೇರುತ್ತವೆ, ದೂರ ಸಂಚಾರ ಮಾಡುವಿರಿ
ಮಕರ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ, ಇತರರನ್ನು ಉಪಕರಿಸಲು ಹೋಗಿ ಕೈ ಸುಟ್ಟುಕೊಳ್ಳುವಿರಿ
ಕುಂಭ: ಪ್ರತಿ ಕೆಲಸ-ಕಾರ್ಯಗಳಲ್ಲಿ ವಿಳಂಬ, ಆದಾಯದ ಮೂಲ ಬತ್ತಿಹೊಗುವ ಸಾಧ್ಯತೆ ಇದೆ
ಮೀನ: ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿರಿ, ಆತ್ಮೀಯರ ಅಗಲುವಿಕೆ ದುಃಖ ಉಂಟುಮಾಡಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin