ಮಹಾರಾಷ್ಟ್ರ ವಿಧಾನಸಭೆಯಿಂದ 19 ವಿಪಕ್ಷ ಶಾಸಕರು 9 ತಿಂಗಳ ಕಾಲ ಸಸ್ಪೆಂಡ್

ಈ ಸುದ್ದಿಯನ್ನು ಶೇರ್ ಮಾಡಿ

Maharashtra-Assmbly

ಮುಂಬೈ, ಮಾ.22– ಸದನದಲ್ಲಿ ಮಾರ್ಚ್ 18ರಂದು ಬಜೆಟ್ ಮಂಡಿಸುವ ವೇಳೆ ಭಾರೀ ಗದ್ದಲ ಸೃಷ್ಟಿಸಿ ಕೋಲಾಹಲಕ್ಕೆ ಕಾರಣವಾದ ಕಾಂಗ್ರೆಸ್ ಮತ್ತು ಎನ್‍ಸಿಪಿ ವಿರೋಧ ಪಕ್ಷದ 19 ಶಾಸಕರನ್ನು ಮಹಾರಾಷ್ಟ್ರ ವಿಧಾನಸಭೆಯಿಂದ 9 ತಿಂಗಳ ಕಾಲ ಅಮಾನತುಗೊಳಿಸಲಾಗಿದೆ. ಇಷ್ಟು ಸಂಖ್ಯೆಯ ಶಾಸಕರನ್ನು ದೀರ್ಘಕಾಲ ಸಸ್ಪೆಂಡ್ ಮಾಡಿರುವುದು ರಾಜ್ಯ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು.  ಕಾಂಗ್ರೆಸ್‍ನ 9 ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‍ಸಿಪಿ)ದ  10 ಶಾಸಕರನ್ನು ಡಿ.31ರ ವರೆಗೆ ಸಸ್ಪೆಂಡ್ ಮಾಡಲಾಗಿದೆ.

ಈ ಸಂಬಂಧ ಇಂದು ಸಂಸದೀಯ ವ್ಯವಹಾರಗಳ ಸಚಿವ ಗಿರೀಶ್ ಬಾಪಟ್ ಮಂಡಿಸಿದ ನಿರ್ಣಯಕ್ಕೆ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಬೆಂಬಲ ಸೂಚಿಸಿದರು.   ರೈತರ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಮಾ.18ರಂದು ವಿಧಾನಸಭೆಯಲ್ಲಿ ಹಣಕಾಸು ಸಚಿವ ಸುಧೀರ್ ಮುಂಗಟ್ಟಿವರ್ ಮಂಡಿಸಿದ ಬಜೆಟ್ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರು ಭಾರೀ ಗದ್ದಲ ಉಂಟುಮಾಡಿ ಸದನದಲ್ಲಿ ಅಲ್ಲೋಲ-ಕಲ್ಲೋಲದ ವಾತಾವರಣ ಸೃಷ್ಟಿಸಿದ್ದರು.  ವಿರೋಧ ಪಕ್ಷದ ಶಾಸಕರು ಅಸಂವಿಧಾನಿಕ ರೀತಿಯಲ್ಲಿ ನಡೆದುಕೊಂಡು ಸದನದ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಬಾಪಟ್ ಆರೋಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin