ಸಾಲಬಾಧೆ : ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ 

ಈ ಸುದ್ದಿಯನ್ನು ಶೇರ್ ಮಾಡಿ

farmers-suicide

ಮಳವಳ್ಳಿ, ಮಾ.22- ಸಾಲಬಾಧೆಯಿಂದ ರೈತನೋರ್ವ ನೇಣಿಗೆ ಶರಣಾಗಿರುವ ಘಟನೆ ತಾಲ್ಲೂಕಿನ ದೇವಿಪುರ ಗ್ರಾಮದಲ್ಲಿ ರಾತ್ರಿ ಜರುಗಿದೆ.ದೇವಿಪುರ ಗ್ರಾಮದ ಚೌಡಯ್ಯ ಅವರ ಪುತ್ರ ಶೈಲೇಂದ್ರ(40) ನೇಣಿಗೆ ಶರಣಾದ ರೈತ.ತಾಯಿ ಹೆಸರಿನಲ್ಲಿ ಇರುವ 1ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಇವರು, ವಿವಿಧ ಬ್ಯಾಂಕ್ ಸಂಘ-ಸಂಸ್ಧೆಗಳಲ್ಲಿ ಮತ್ತು ಕೈಸಾಲ ಸೇರಿ ಸುಮಾರು 4 ಲಕ್ಷ ರೂ. ಸಾಲ ಮಾಡಿರುವುದಾಗಿ ತಿಳಿದು ಬಂದಿದೆ.ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ರಾತ್ರಿ ನೇಣಿಗೆ ಶರಣಾಗಿದ್ದು , ಈ ಸಂಬಂಧ ಮೃತನ ಹೆಂಡತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ.ಸ್ಧಳಕ್ಕೆ ತಹಸೀಲ್ದಾರ್ ದಿನೇಶ್‍ಚಂದ್ರು, ಕೃಷಿ ಇಲಾಖೆ ಅಧಿಕಾರಿ ರಮೇಶ್ ಬೇಟಿನೀಡಿ ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರಲ್ಲದೇ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ .

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin