BIG NEWS : ಚೆನ್ನೈ ಬಂದರಿನಲ್ಲಿ 10 ಕಂಟೈನರ್‍ ಖೋಟಾ ನೋಟು ಪತ್ತೆ ..!

ಈ ಸುದ್ದಿಯನ್ನು ಶೇರ್ ಮಾಡಿ

Fake-Notes

ಚೆನ್ನೈ, ಮಾ.22-ಭಾರತದ ಆರ್ಥಿಕ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಲು ಚೀನಾ ಮತ್ತು ಪಾಕಿಸ್ತಾನ ನಡೆಸುತ್ತಿರುವ ದೊಡ್ಡ ಮಟ್ಟದ ಕುತಂತ್ರ ಬಯಲಾಗಿದೆ. ದೇಶದೊಳಗೆ ನಕಲಿ ನೋಟುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಸುಳಿವಿನ ಮೇರೆಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಮತ್ತು ಆದಾಯ ಗುಪ್ತಚರ ನಿರ್ದೇಶನಾಲಯ(ಡಿಐಆರ್) ತಮಿಳುನಾಡಿನ ಚೆನ್ನೈ ಬಂದರಿನಲ್ಲಿ 10 ದೊಡ್ಡ ಕಂಟೈರ್‍ನರ್‍ಗಳಲ್ಲಿದ್ದ ಕೋಟಿ ಕೋಟಿ ಖೋಟಾ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ. ಇವು ಚೀನಾದಲ್ಲಿ ಮುದ್ರಣವಾಗಿರುವ ಸಾಧ್ಯತೆ ಇದ್ದು, ತನಿಖೆ ತೀವ್ರಗೊಂಡಿದೆ.

ಚೆನ್ನೈ ನಗರಿಯ ಬಂದರಿಗೆ ಬಂದ ಹಡಗಿನಲ್ಲಿದ್ದ 10 ಕಂಟೈನರ್‍ಗಳನ್ನು ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ 500 ರೂ.ಗಳು ಮತ್ತು 2,000 ರೂ.ಗಳ ಮುಖಬೆಲೆಯ ಕೋಟ್ಯಂತರ ರೂ. ನಕಲಿ ನೋಟುಗಳು ಪತ್ತೆಯಾದವು. ಈ ಹಿನ್ನೆಲೆಯಲ್ಲಿ ಕಸ್ಟಮ್ಸ್ ಮತ್ತು ಡಿಐಆರ್ ಸಿಬ್ಬಂದಿ ತಪಾಸಣೆಯನ್ನು ತೀವ್ರಗೊಳಿಸಿದ್ದು, ದೇಶದ ಇತರ ಬಂದರುಗಳಿಗೂ ಇಂಥ ಕಳ್ಳ ಮಾಲು ಬಂದಿರುವ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುವಂತೆ ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಸರಕುಗಳಿದ್ದ ಕಂಟೈನರ್‍ಗಳಂತೆ ಇವು ಕಂಡಬಂದರೂ ಒಳಗೆ ನಕಲಿ ನೋಟುಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಚೀನಾದಲ್ಲಿ ಮುದ್ರಣವಾದ ಭಾರೀ ಖೋಟಾ ನೋಟುಗಳ ಮಾಲು ಇದಾಗಿದೆ ಎಂದು ಶಂಕಿಸಲಾಗಿದೆ. ಇದು ಚೆನ್ನೈ ಬಂದರಿಗೆ ತಲುಪಿರುವ ಕಳ್ಳ ಸಾಗಣೆ ಮಾರ್ಗ ಮತ್ತು ಇದರಲ್ಲಿ ಶಾಮೀಲಾಗಿರುವವರ ತಲಾಷೆ ಮುಂದುವರಿದಿದೆ.

ಕಂಟೈನರ್‍ಗಳಲ್ಲಿದ್ದ ಕೋಟಿ ಕೋಟಿ ರೂ. ಕರೆನ್ಸಿಯು ಭಾರತದ ಅಸಲಿ ನೋಟಿನ ತದ್ರೂಪಿನಂತೆ ಇದೆ. ಇದನ್ನು ನಕಲಿ ಎಂದು ಗುರುತಿಸಲು ಕಷ್ಟವಾಗುವ ರೀತಿಯಲ್ಲಿ ಇದನ್ನು ಮುದ್ರಿಸಲಾಗಿದೆ. ನಕಲಿ ವಸ್ತುಗಳ ತಯಾರಿಕೆಯಲ್ಲಿ ಕುಖ್ಯಾತವಾಗಿರುವ ಚೀನಾ ಈಗ ಭಾರತದ ಆರ್ಥಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕುಕೃತ್ಯಕ್ಕೆ ಕೈಹಾಕಿದ್ದು, ಇದಕ್ಕೆ ಪಾಕಿಸ್ತಾನ ಸಹ ಕೈಜೋಡಿಸಿದೆ ಎಂದು ಮೂಲಗಳು ತಿಳಿಸಿವೆ.   ಆ ದೇಶಗಳಿಂದ ನಕಲಿ ನೋಟುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಸ್ಟಮ್ಸ್ ಮತ್ತು ಆದಾರ ಗುಪ್ತಚರ ನಿರ್ದೇಶನಾಲಯ (ಡಿಐಆರ್) ಅಧಿಕಾರಿಗಳು ಇಂದು ಸಹ ದೇಶದ ಪ್ರಮುಖ ನಗರಗಳ ಬಂದರುಗಳು ಮತ್ತಿತರ ಪ್ರದೇಶಗಳಲ್ಲಿ ತೀವ್ರ ಶೋಧ ಮುಂದುವರಿಸಿದ್ದಾರೆ.

ಹೊಸ 500 ಮತ್ತು 2,000 ರೂ.ಗಳ ಮುಖಬೆಲೆಯ ನಕಲಿ ಕರೆನ್ಸಿಗಳೂ ಸೇರಿದಂತೆ ವಿವಿಧ ಖೋಟಾ ನೋಟುಗಳನ್ನು ಕಳ್ಳಸಾಗಣೆ ಮೂಲಕ ದೇಶದೊಳಗೆ ತರಲು ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಿಂದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮುಂಬೈ, ಚೆನ್ನೈ, ಕೊಲ್ಕತಾ, ಕಾನ್ಪುರ, ತುಘಲಕಾಬಾದ್ ಸೇರಿದಂತೆ ದೇಶದ ವಿವಿಧೆಡೆ ತೀವ್ರ ಶೋಧ ಮುಂದುವರಿದಿದೆ.   ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಥವಾ ನೇಪಾಳದಿಂದ ನಕಲಿ ನೋಟುಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡುವ ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಆ ದೇಶಗಳಿಂದ ಬಂದಿರುವ ಎಲ್ಲ ಸರಕುಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.   ಇತ್ತೀಚಿನ ದಿನಗಳಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದ್ದು, ಅನೇಕ ಪ್ರಕರಣಗಳು ಪತ್ತೆಯಾಗಿವೆ. ಚೀನಾ, ಪಾಕಿಸ್ತಾನ ಸೇರಿದಂತೆ ಕೆಲವು ದೇಶಗಳು ಭಾರತದೊಳಗೆ ಖೋಟಾ ಕರೆನ್ಸಿಗಳನ್ನು ತರಲು ಕುತಂತ್ರ ನಡೆಸುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin