ಈತನ ಶೂನಲ್ಲಿದ್ದವು 1,000 ವಜ್ರಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Diamonds--01

ಶೆಂಝೆನ್ (ಚೀನಾ), ಮಾ.23– ಶೂಗಳಲ್ಲಿ 1,000 ವಜ್ರಗಳನ್ನು ಬಚ್ಚಿಟ್ಟುಕೊಂಡು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಚಾಲಾಕಿ ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹಾಂಕಾಂಗ್‍ನಿಂದ ಚೀನಾದ ಗುವಾಂಗ್‍ಡಾನ್ ಪ್ರಾಂತ್ಯದ ಶೆಂಝೆನ್ ನಗರಕ್ಕೆ ಈತ ಶೂಗಳಲ್ಲಿ 212.9 ಕ್ಯಾರೆಟ್ ವಜ್ರಗಳನ್ನು ಅಡಗಿಸಿಟ್ಟುಕೊಂಡು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ. ಕಸ್ಟಮ್ಸ್ ಅಧಿಕಾರಿಗಳು, ಲುವೊಕು ಬಂದರಿನಲ್ಲಿ ಈತನನ್ನು ತಪಾಸಣೆಗೆ ಒಳಪಡಿಸಿದರು. ಶೂಗಳ ಹಿಮ್ಮಡಿಯಲ್ಲಿ 1,000 ವಜ್ರಗಳು ಹೊಳೆಯುತ್ತಿದ್ದವು.

ಈ ವ್ಯಕ್ತಿ ಬಂದರು ಪ್ರದೇಶದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ. ತುದಿಗಾಲಲ್ಲಿ ನಡೆಯುತ್ತಿದ್ದ. ನಮ್ಮನ್ನು ಕಂಡ ಕೂಡಲೇ ಮಾಮೂಲಿನಂತೆ ನಡೆಯುತ್ತಿದ್ದ. ಈತನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಶೂಗಳ ಹಿಮ್ಮಡಿಯಲ್ಲಿ ವಜ್ರಗಳು ಇದ್ದವು ಎಂದು ಸುಂಕ ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin