ಗುಂಡ್ಲುಪೇಟೆ ಲಾಠಿಚಾರ್ಜ್ ಪ್ರಕರಣ : ಪಿಎಸ್‍ಐ ಎತ್ತಂಗಡಿ

ಈ ಸುದ್ದಿಯನ್ನು ಶೇರ್ ಮಾಡಿ

Lathi-Charge--01

ಚಾಮರಾಜನಗರ,ಮಾ.23- ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಪ್ರಕರಣ ಸಂಬಂಧ ಪಿಎಸ್‍ಐ ಸಂದೀಪ್ ಕುಮಾರ್ ಅವರನ್ನು ಮೈಸೂರಿನ ವರುಣಾ ಠಾಣೆಗೆ ಕೇಂದ್ರ ಚುನಾವಣಾ ಆಯೋಗ ವರ್ಗಾವಣೆ ಮಾಡಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‍ಐ ಸಂದೀಪ್‍ಕುಮಾರ್ ಬಿಜೆಪಿ ಅಭ್ಯರ್ಥಿ ನಿರಂಜನ್ ನಾಮಪತ್ರ ಸಲ್ಲಿಕೆ ದಿನದಿಂದ ಅಪಾರ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಕಾರ್ಯಕರ್ತರ ಮೇಲೆ ಪಿಎಸ್‍ಐ ಲಾಠಿಚಾರ್ಜ್ ಮಾಡಿದ್ದರು.

ಈ ಬಗ್ಗೆ ಬಿಜೆಪಿ, ಕಾಂಗ್ರೆಸ್ ನಾಯಕರ ಮಾತುಕೇಳಿ ಲಾಠಿಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ದೂರಿನ ಮೇರೆಗೆ ಕೇಂದ್ರ ಚುನಾವಣಾ ಆಯೋಗ ಪಿಎಸ್‍ಐ ಅವರನ್ನು ವರ್ಗಾವಣೆ ಮಾಡುವಂತೆ ದಕ್ಷಿಣ ವಲಯದ ಐಜಿಪಿ ಸೂಚಿಸಿದ್ದರು. ಐಜಿಪಿಯವರ ಸೂಚನೆ ಮೇರೆಗೆ ಚಾಮರಾಜನಗರದ ಎಸ್ಪಿ ಕುಲದೀಪ್ ಕುಮಾರ್ ಜೈನ್ ಅವರು ಪಿಎಸ್‍ಐ ಸಂದೀಪ್ ಕುಮಾರ್ ಅವರನ್ನು ವರುಣಾ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin