ಜುಲೈ ಅಂತ್ಯದೊಳಗೆ ಪಿಎಲ್‍ಡಿ ಬ್ಯಾಂಕ್‍ಗಳಲ್ಲಿ ಖಾಲಿ ಇರುವ 496 ವಿವಿಧ ಹುದ್ದೆಗಳ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-Session

ಬೆಂಗಳೂರು,ಮಾ.23- ಪಿಎಲ್‍ಡಿ ಬ್ಯಾಂಕ್‍ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಜುಲೈ ತಿಂಗಳ ಅಂತ್ಯದೊಳಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಪರಿಷತ್‍ನಲ್ಲಿ ತಿಳಿಸಿದರು.   ರಾಜ್ಯದ ವಿವಿಧೆಡೆ ಪಿಎಲ್‍ಡಿ ಬ್ಯಾಂಕ್‍ಗಳಲ್ಲಿ ಖಾಲಿ ಇರುವ 496 ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಸಾಮಾನ್ಯ ಶ್ರೇಣಿ ಸಮಿತಿ ಪ್ರಾಧಿಕಾರಕ್ಕೆ ಅನುಮತಿ ನೀಡಲಾಗಿದ್ದು, ಜುಲೈ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು.
ಪ್ರಶ್ನೋತ್ತರ ವೇಳೆ ಆರ್.ಚೌಡರೆಡ್ಡಿ ತೂಪಲ್ಲಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪಿಎಲ್‍ಡಿ ಬ್ಯಾಂಕ್‍ನ ವೃಂದ ಮತ್ತು ನೇಮಕಾತಿ ಪ್ರಕಾರ 1399 ಹುದ್ದೆ ಮಂಜೂರಾಗಿದ್ದು , ಇದರಲ್ಲಿ 496 ಹುದ್ದೆಗಳನ್ನು ಪಿಕಾರ್ಡ್ ಬ್ಯಾಂಕ್‍ಗಳಿಗೆ ನೇರ ನೇಮಕಾತಿ ಮಾಡುವಲ್ಲಿ ಅವಕಾಶವಿದೆ ಎಂದರು.

ರಾಜ್ಯದಲ್ಲಿ ಒಟ್ಟು 177 ಪಿಎಲ್‍ಡಿ ಬ್ಯಾಂಕ್ ಪಿಕಾರ್ಡ್‍ಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಇವುಗಳು 10 ಲಕ್ಷದವರೆಗೂ ರೈತರಿಗೆ ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ರಾಜ್ಯ ಸರ್ಕಾರ ಶೇ.10ರಷ್ಟು ಬಡ್ಡಿ ರಿಯಾಯ್ತಿ ನೀಡಿದರೆ ಪಿಕಾರ್ಡ್ ಬ್ಯಾಂಕ್‍ಗಳು ಶೇ.3ರಷ್ಟು ಬಡ್ಡಿ ನೀಡುತ್ತಿದೆ.   ದೀರ್ಘಾವಧಿ, ಮಧ್ಯಮಾವಧಿ ಸೇರಿದಂತೆ ವಿವಿಧ ರೀತಿಯಲ್ಲಿ ಸಾಲಗಳನ್ನು ನೀಡುತ್ತದೆ. ಕೃಷಿ ಸುಧಾರಣೆ, ತೋಡುಬಾವಿ, ಕೋರೆಬಾವಿ, ಕೆರೆಗಳ ನಿರ್ಮಾಣ, ಹನಿನೀರಾವರಿ, ಏತನೀರಾವರಿ ಅಲ್ಲದೆ ಟ್ರ್ಯಾಕ್ಟರ್ ಖರೀದಿ, ಎತ್ತಿನಗಾಡಿ , ಕಬ್ಬಿನ ರಸ ತೆಗೆಯುವ ಯಂತ್ರ ಸೇರಿದಂತೆ ಕೃಷಿಗೆ ಉಪಯೋಗಿಸುವ ಯಂತ್ರಗಳಿಗೆ ಸಾಲ ನೀಡುತ್ತಾ ಬಂದಿದೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin