ಡಿಎಸ್‍ಎಸ್ ಭೀಮವಾದ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

2

ಗದಗ,ಮಾ.22- ಜಿಲ್ಲೆಯಲ್ಲಿಯ ಡಿಎಸ್‍ಎಸ್ ಭೀಮವಾದ ರಾಜ್ಯ ಸಮಿತಿಯಿಂದ ರಾಜ್ಯಾದಂತ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಸಚಿಜಯ ಆರ್. ದೊಡ್ಡಮನಿ ಮಾತನಾಡಿ, ಬಡ್ತಿ ಮೀಸಲಾತಿಗೆ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. 2002ರಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿಯನ್ನು ರದ್ದುಪಡಿಸಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪು ಸಂವಿಧಾನಕ್ಕೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ದ ಇರುವ ಆದೇಶದ ವಿರುದ್ದ ರಾಜ್ಯ ಸರಕಾರ ಕೂಡಲೇ ಮರು ಪರಿಶೀಲನಾ ಅರ್ಜಿ ಸಲ್ಲಿಸಿ ಈ ದಲಿತ ಜನಾಂಗಕ್ಕೆ ನ್ಯಾಯಕೊಡಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು. ಆ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲೇಶ ಛಲವಾದಿ, ಅಜಯ ಪಾಟೀಲ, ಪರಶುರಾಮ್ ಯಾವಗಲ್, ಭಾರತಿ ಶಲವಡಿ ಹಾಗೂ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ನಿಂಗಪ್ಪ ಛಲವಾದಿ, ವಸಂತ ಛಲವಾದಿ, ಕರಿಯಪ್ಪ ಕರಮಡಿ, ಮುತ್ತಪ್ಪ ಮಾಳವಾಡ, ಬಸವರಾಜ ಕಾಳೆ, ಹುಲಗಪ್ಪ ದೊಡ್ಡಮನಿ, ಸೋಮು ನಾಗರಾಜ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ದಲಿತ ಅಭಿಮಾನಿಗಳು, ಪ್ರಗತಿಪರ ವಿಚಾರವಂತರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin