ಭಗತ್‍ಸಿಂಗ್‍ಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

Bhagat-Singh--01

ನವದೆಹಲಿ, ಮಾ.23-ಭಾರತದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ವೀರಪುರುಷ ಭಗತ್‍ಸಿಂಗ್, ಶಿವರಾಮ್ ಹರಿ ರಾಜಗುರು ಮತ್ತು ಸುಖ್‍ದೇವ್ ಥಾಪರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಇಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇವರು ತೋರಿದ ಕೆಚ್ಚೆದೆಯ ಹೋರಾಟ ಮತ್ತು ಬಲಿದಾನವನ್ನು ಮೋದಿ ಟ್ವೀಟರ್‍ನಲ್ಲಿ ಕೊಂಡಾಡಿದ್ದಾರೆ. ಇವರ ತ್ಯಾಗವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇಂದಿಗೆ 86 ವರ್ಷಗಳ ಹಿಂದೆ ಮಾರ್ಚ್ 23, 1931ರಂದು ಲಾಹೋರ್ ಜೈಲಿನಲ್ಲಿ ಈ ಮೂವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು.  ಭಗತ್‍ಸಿಂಗ್ ನೇಣುಗಂಭಕ್ಕೇರಿದಾಗ ಅವರ ವಯಸ್ಸು 23 ವರ್ಷಗಳು. ಪಂಜಾಬ್ ಪ್ರಾಂತ್ಯದ ಆಗಿನ ಫೈಸ್ಲಾಬಾದ್ ಜಿಲ್ಲೆ ಬಾಂಗಾ ಗ್ರಾಮದಲ್ಲಿ 1907ರಲ್ಲಿ ಭಗತ್ ಸಿಂಗ್ ಜನಿಸಿದರು. ಬ್ರಿಟಿಷ್ ದಬ್ಬಾಳಿಕೆ ವಿರುದ್ಧ ಸಿಡಿದ್ದೆದ್ದರು. ಆಂಗ್ಲರಿಗೆ ಸಿಂಹಸ್ವಪ್ನವಾಗಿದ್ದ ಈ ಮೂವರನ್ನು ಬಾಂಬ್ ದಾಳಿ ಆರೋಪದ ಮೇಲೆ ಗಲ್ಲಿಗೇರಿಸಲಾಯಿತು. ಈ ಮೂವರು ವೀರಾಗ್ರಣಿಗಳ ಗೌರವಾರ್ಥ ಪ್ರತಿ ವರ್ಷ ಮಾರ್ಚ್ 23 ರಂದು ಪಂಜಾಬ್‍ನಲ್ಲಿ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin