ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅನುಮತಿ

ಈ ಸುದ್ದಿಯನ್ನು ಶೇರ್ ಮಾಡಿ

UT-Khadar

ಬೆಂಗಳೂರು, ಮಾ. 23- ಗ್ರಾಮೀಣ ಭಾಗದಲ್ಲಿ 500 ಕಾರ್ಡ್ ಗಳಿಗೆ ಒಂದರಂತೆ, ನಗರ ಪ್ರದೇಶಗಳಿಗೆ 800 ಕಾರ್ಡ್‍ಗಳಿಗೆ ಒಂದರಂತೆ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಆರಂಭಿಸಲು ಅನುಮತಿ ನೀಡುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಭರವಸೆ ನೀಡಿದ್ದಾರೆ.  ವಿಧಾನಸಭೆಯಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಾರ್ಡ್‍ಗಳಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇನ್ನು ಮುಂದೆ ಮಾರ್ಗಸೂಚಿಯಂತೆ ನ್ಯಾಯಬೆಲೆ ಅಂಗಡಿಗಳನ್ನು ಪುನರ್ ವಿಂಗಡಣೆ ಮಾಡಲಾಗುವುದು. ಈಗಾಗಲೇ ಪಡಿತರ ಚೀಟಿದಾರರ ಕುಟುಂಬದ ದತ್ತಾಂಶವನ್ನು ಸಂಗ್ರಹಿಸಲಾಗಿದೆ.

ಪಡಿತರ ಚೀಟಿಗಳಲ್ಲಿನ ಸದಸ್ಯರ ವಿವರಗಳನ್ನು ಆಧಾರ್‍ಗೆ ಜೋಡಣೆ ಮಾಡ ಲಾಗಿದೆ. ನಗರ ಪ್ರದೇಶದಲ್ಲಿ ಆಧಾರ್‍ನ ಬೆರಳಚ್ಚು ಬಯೋಮೆಟ್ರಿಕ್ ದೃಢೀಕೃತ ಕೂಪನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು.  ಗ್ರಾಮಾಂತರ ಪ್ರದೇಶದಲ್ಲಿ ಪಡಿತರ ವಿತರಣೆಯಾಗುತ್ತಿದ್ದಂತೆ ಆನ್‍ಲೈನ್ ಐವಿಆರ್‍ಎಸ್ ಮೂಲಕ ಮಾಹಿತಿ ಅಪ್‍ಡೇಟ್ ಆಗುತ್ತಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಜಾಗೃತ ಸಮಿತಿಗಳನ್ನು ತೆರೆಯಲಾಗಿದೆ.

ಪಡಿತರ ಪದಾರ್ಥಗಳ ದುರುಪಯೋಗ ತಡೆಗಟ್ಟಲು ಬಹುಮಾನ ನೀಡುವ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹೀಗಾಗಿ ಇನ್ನು ಮುಂದೆ ನಿಗದಿತ ಸಂಖ್ಯೆಗಿಂತ ಹೆಚ್ಚು ಕಾರ್ಡ್‍ಗಳಿರುವ ನ್ಯಾಯಬೆಲೆ ಅಂಗಡಿಗಳನ್ನು ವಿಭಜಿಸಲಾಗುವುದು. ಯಾರ್ಯಾರು ಅರ್ಜಿ ಸಲ್ಲಿಸುತ್ತಿರುತ್ತಾರೋ ಅವುಗಳನ್ನು ಪರಿಶೀಲಿಸಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅನುಮತಿ ನೀಡಲಾಗುವುದು. ಹೊಸ ಪಡಿತರ ಚೀಟಿಗಳನ್ನು ಹದಿನೈದುದಿನದಲ್ಲಿ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಸಚಿವರು ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin