ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಿಸಿ ಆದೇಶ ಹೊರಡಿಸಿದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

 

Salary

ಬೆಂಗಳೂರು,ಮಾ.24-ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವಿಧಾನಪರಿಷತ್‍ನ ಶೂನ್ಯ ವೇಳೆಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಈ ಕುರಿತು ಹೇಳಿಕೆ ನೀಡಿ, ಸ್ನಾತಕೋತ್ತರ ಪದವಿ ಪಡೆದು ಎನ್‍ಇಡಿ, ಎಸ್‍ಎಲ್‍ಇಡಿ, ಪಿಎಚ್‍ಡಿ ಮಾಡಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರ ಗೌರವಧನವನ್ನು 11,500 ರೂ.ನಿಂದ 13 ಸಾವಿರ ರೂ.ಗೆ ಹಾಗೂ ಉಪನ್ಯಾಸಕರ ಗೌರವಧನವನ್ನು 9,500 ರೂ.ನಿಂದ 11,500 ರೂ.ಗೆ ಹೆಚ್ಚಳ ಮಾಡಿ ಆದೇಶಿಸಿದ್ದು, ಮಾರ್ಚ್‍ನಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಅದೇ ರೀತಿ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರ ಗೌರವ ಧನವನನ್ನು 7,500 ರೂ.ನಿಂದ 9,500 ರೂ.ಗಳಿಗೆ ಹೆಚ್ಚಳ ಮಾಡಿ ಇಂದೇ ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin