ಮೆಡಿಟರೇನಿಯನ್ ಸಮುದ್ರದಲ್ಲಿ 250 ಆಫ್ರಿಕಾ ವಲಸಿಗರ ಜಲಸಮಾಧಿ

ಈ ಸುದ್ದಿಯನ್ನು ಶೇರ್ ಮಾಡಿ

Meditarian--01

ರೋಮ್, ಮಾ.24-ಮೆಡಿಟರೇನಿಯನ್ ಸಮುದ್ರವು ವಲಸಿಗರಿಗೆ ಮೃತ್ಯಕೂಪವಾಗಿ ಪರಿಣಮಿಸುತ್ತಿದೆ. ಈಗಾಗಲೇ ನೂರಾರು ಮಂದಿಯನ್ನು ಆಪೋಶನ ತೆಗೆದುಕೊಂಡಿರುವ ಕೆಂಪು ಸಮುದ್ರದಲ್ಲಿ ಸುಮಾರು 250 ಆಫ್ರಿಕಾ ವಲಸಿಗರು ಜಲ ಸಮಾಧಿಯಾಗಿದ್ದಾರೆ.   ಲಿಬಿಯಾ ಕರಾವಳಿ ಪ್ರದೇಶದಿಂದ 15 ಮೈಲಿ ದೂರದ ಸಾಗರದಲ್ಲಿ ಎರಡು ರಬ್ಬರ್ ದೋಣಿಗಳ ಬಳಿ ಹಲವಾರು ಮೃತದೇಹಗಳನ್ನು ರಕ್ಷಣಾ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ.   ಲಿಬಿಯಾದಿಂದ ರೋಮ್‍ಗೆ ಪಲಾಯನವಾಗುತ್ತಿದ್ದ ಸಂದರ್ಭದಲ್ಲಿ ಆಫ್ರಿಕಾದ ವಲಸಿಗರಿದ್ದ ಅಸುರಕ್ಷಿತ ರಬ್ಬರ್ ದೋಣಿಗಳು ಮುಳುಗಿ ಈ ದುರಂತ ಸಂಭವಿಸಿರಬಹುದೆಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ-ಯುಎನ್‍ಎಚ್‍ಸಿಆರ್ ಶಂಕೆ ವ್ಯಕ್ತಪಡಿಸಿದೆ.

ಮಾನವ ಕಳ್ಳಸಾಗಣೆದಾರರು ಎರಡು ದೋಣಿಗಳಲ್ಲಿ ತಲಾ 120 ರಿಂದ 140 ಮಂದಿಯನ್ನು ಕೊಂಡ್ಯೊಯುತ್ತಿದ್ದಾಗ ಪ್ರತಿಕೂಲ ಹವಾಮಾನ ಅಥವಾ ಕಿಕ್ಕಿರಿದು ತುಂಬಿದ್ದ ದೋಣಿಗಳ ಭಾರದಿಂದ ಸಮುದ್ರದಲ್ಲಿ ಮುಳುಗಡೆಯಾಗಿದೆ ಎಂದು ಇನ್ನೊಂದು ಮೂಲಗಳು ಹೇಳಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin