ವಿಧಾನಸಭೆಯಲ್ಲಿ ಪಂಚಾಯತ್ ಸಿಇಒ ರೈತನ ಹೆಗಲೇರಿ ಕಾಲುವೆ ದಾಟಿದ ಪ್ರಸಂಗ ಪ್ರಸ್ತಾಪ

ಈ ಸುದ್ದಿಯನ್ನು ಶೇರ್ ಮಾಡಿ

Session-01

ಬೆಂಗಳೂರು,ಮಾ.24-ರಾಯಚೂರಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರು, ರೈತರೊಬ್ಬರ ಹೆಗಲೇರಿ ಕುಳಿತು ಕಾಲುವೆ ದಾಟಿದ ವಿಷಯ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿತು.  ಇಂದು ಸದನ ಸಮಾವೇಶಗೊಂಡ ಬಳಿಕ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ವಿಷಯ ಪ್ರಸ್ತಾಪಿಸಿ, ಸಿಇಒ ಒಬ್ಬರು ರೈತನೊಬ್ಬರ ಹೆಗಲ ಮೇಲೆ ಕುಳಿತು ಕಾಲುವೆ ದಾಟಿದ್ದಾರೆ. ಸರ್ಕಾರಿ ಅಧಿಕಾರಿಗಳು ಈ ರೀತಿ ಮಾಡಿರುವುದು ಇದು ನಾಡಿನ ಜನತೆಗೆ ಮಾಡಿದ ಅಪಮಾನ ಎಂದು ಸದನದಲ್ಲಿ ಗಮನಸೆಳೆದರು.   ಆಗ ಸ್ಪೀಕರ್ ಕೋಳಿವಾಡ ಮಾತನಾಡಿ, ನೋಟಿಸ್ ಕೊಡದೆ ವಿಷಯ ಪ್ರಸ್ತಾಪ ಮಾಡಿದ್ದೀರಿ, ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾವನೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin