ಸೋನಾಕ್ಷಿ ಪತ್ರಕರ್ತೆಯಾದರೆ ಸಲ್ಲುಗೆ ಯಾವ ಪ್ರಶ್ನೆಗಳನ್ನು ಕೇಳುತ್ತಿದ್ದಳು..?

ಈ ಸುದ್ದಿಯನ್ನು ಶೇರ್ ಮಾಡಿ

sonakshi

ಬಾಲಿವುಡ್ ಬ್ಯೂಟಿಫುಲ್ ಡಾಲ್ ಸೋನಾಕ್ಷಿ ಸಿನ್ಹಾ ಪತ್ರಕರ್ತೆಯಾಗಿದ್ದರೆ ಸೂಪರ್‍ಸ್ಟಾರ್ ಸಲ್ಮಾನ್ ಖಾನ್‍ಗೆ ಯಾವ ಯಾವ ಪ್ರಶ್ನೆಗಳನ್ನು ಕೇಳುತ್ತಿದ್ದಳು? ಇದೇ ಪ್ರಶ್ನೆಯನ್ನು ಸೋನುಗೆ ಸಿನಿ ಪತ್ರಕರ್ತರು ಕೇಳಿದ್ದಾರೆ. ಸಲ್ಲು ಮದುವೆ ಬಗ್ಗೆ ಎಲ್ಲರೂ ಕೇಳುವ ಪ್ರಶ್ನೆಯನ್ನೇ ನಾನೂ ಕೂಡ ಕೇಳುತ್ತಿದ್ದೆ ಎಂದು ಬಿ-ಟೌನ್ ಬೆಡಗಿ ಹೇಳಿದ್ದಾಳೆ. ನೂರ್ ಚಿತ್ರದಲ್ಲಿ ಸೋನು ಪತ್ರಕರ್ತೆಯಾಗಿ ಅಭಿನಯಿಸಿದ್ದಾಳೆ. ಆಕೆಯ ಪಾತ್ರವನ್ನೇ ಮುಂದಿಟ್ಟುಕೊಂಡು ಮಾಧ್ಯಮ ಪ್ರತಿನಿಧಿಗಳು ಮಾತಿಗೆಳೆದರು. ಸಲ್ಮಾನ್ ಖಾನ್ ಮದುವೆ ಬಗ್ಗೆ ಪ್ರತಿಯೊಬ್ಬರು ಅನೇಕ ವರ್ಷಗಳಿಂದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಲ್ಲು ಇನ್ನೂ ಏಕೆ ವಿವಾಹವಾಗಿಲ್ಲ ಎಂಬ ಪ್ರಶ್ನೆಯನ್ನೂ ನಾನು ಕೂಡ ಕೇಳುತ್ತೇನೆ ಎಂದು ಸೋನು ಉತ್ತರಿಸಿದ್ದಾಳೆ.

ಹಿರಿಯ ನಟರೂ ಆಗಿರುವ ನಿಮ್ಮ ತಂದೆ ಶತೃಘ್ನ ಸಿನ್ಹ ಅವರಿಗೆ ನೀವೇನು ಪ್ರಶ್ನೆ ಕೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆಕೆ, ಅವರು ಬರೆದ ಕಾಮೋಶ್ ಪುಸ್ತಕದಲ್ಲಿ ಇಲ್ಲದ ಸಂಗತಿ ಬಗ್ಗೆ ನಾನು ಪ್ರಶ್ನೆ ಕೇಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾಳೆ. ನಾನು ನಿಜ ಜೀವನದಲ್ಲಿ ಪತ್ರಕರ್ತೆಯಾಗಿದ್ದರೆ, ನಟ-ನಟಿಯರ ಅಭಿನಯ ಕೌಶಲ್ಯ, ಅವರ ಕಲಾ ಪ್ರೌಢಿಮೆ ಮೊದಲಾದ ವಿಷಯಗಳ ಬಗ್ಗೆಯೂ ಪ್ರಶ್ನಿಸುತ್ತಿದೆ ಎಂದು ಉತ್ತರಿಸುತ್ತಾಳೆ ಸೋನು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin