ಹೊಸ ಆರೋಗ್ಯ ನೀತಿ ಜಾರಿಗೆ ಮುಂದಾಗಿದ್ದ ಟ್ರಂಪ್‍ಗೆ ಭಾರೀ ಹಿನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್,ಮಾ.24-ಅಮೆರಿಕ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬರಾಕ್ ಒಬಾಮ ಅವರು ಜಾರಿಗೆ ತಂದಿದ್ದ ಒಬಾಮ ಕೇರ್ ಆರೋಗ್ಯ ನೀತಿಯನ್ನು ರದ್ದುಗೊಳಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ. ಹಿಂದಿನ ಆರೋಗ್ಯ ನೀತಿಯನ್ನು ರದ್ದುಗೊಳಿಸಿ ಹೊಸ ಆರೋಗ್ಯ ಸೇವೆಗಳ ಸುಧಾರಣೆಯನ್ನು ಜಾರಿಗೊಳಿಸುವ ಟ್ರಂಪ್ ಆಡಳಿತಕ್ಕೆ ಸಾಕಷ್ಟು ಬೆಂಬಲ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಆರೋಗ್ಯ ನೀತಿ ಮತದಾನ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

ನಿನ್ನೆ ರಾತ್ರಿ ಈ ಸಂಬಂಧ ಮತದಾನ ನಡೆಯಬೇಕಿತ್ತು. ಆದರೆ ಬಹುತೇಕ ಸದಸ್ಯರು ಸಭೆಗೆ ಗೈರುಹಾಜರಾದ ಕಾರಣ, ಸ್ಪೀಕರ್ ಪಾಲ್ ರಯಾನ್ ಮತದಾನವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.   ಇದರಿಂದ ಕುಪಿತಗೊಂಡಿರುವ ಟ್ರಂಪ್, ತಮ್ಮ ರಿಪಬ್ಲಿಕನ್ ಸದಸ್ಯರಿಗೆ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಕಟ್ಟಪ್ಪಣೆ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin