ಚೀನಾ ಚಿನ್ನದ ಗಣಿ ದುರಂತದಲ್ಲಿ 12ಕ್ಕೂ ಹೆಚ್ಚು ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Gold-Minie--01

ಬೀಜಿಂಗ್, ಮಾ.25-ಚೀನಾದ ಹೆನಾನ್ ಪ್ರಾಂತ್ಯದ ಅಕ್ಕಪಕ್ಕದ ಚಿನ್ನದ ಗಣಿಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ದುರಂತಗಳಲ್ಲಿ 12ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಅಪಾಯಕಾರಿ ಇಂಗಾಲ ಮೊನೊಕ್ಸೈಡ್ ಈ ಗಣಿ ಕಾರ್ಮಿಕರನ್ನು ಆಪೋಶನ ತೆಗೆದುಕೊಂಡಿದೆ.   ಲಿಂಗ್‍ಬಾವೋ ನಗರದ ಚೀನಾ ನ್ಯಾಷನಲ್ ಗೋಲ್ಡ್ ಗ್ರೂಪ್‍ನ ಕ್ವಿನ್‍ಲಿಂಗ್ ಚಿನ್ನದ ಗಣಿಯ ಸುರಂಗದಲ್ಲಿ ನಿನ್ನೆ ರಾತ್ರಿ ದಟ್ಟ ಹೊಗೆ ಕಾಣಿಸಿಕೊಂಡು 12 ಕಾರ್ಮಿಕರು ಮತ್ತು ಆರು ಮಂದಿ ಆಡಳಿತ ಸಿಬ್ಬಂದಿ ಒಳಗೆ ಸಿಲುಕಿದ್ದರು.

ರಕ್ಷಣಾ ಕಾರ್ಯಕರ್ತರು ಶೋಧ ನಡೆಸಿದಾಗ 9 ಮೃತ ದೇಹಗಳು ಪತ್ತೆಯಾದವು. ಉಸಿರುಗಟ್ಟಿ ಅಸ್ವಸ್ಥರಾದ ಉಳಿದ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರ್ಮಿಕನೊಬ್ಬ ಅಸುನೀಗಿದ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿಯ ಘಟನೆ ಇದರ ಪಕ್ಕದಲ್ಲಿದ್ದ ಇನ್ನೊಂದು ಚಿನ್ನದ ಗಣಿಯಲ್ಲೂ ಸಂಭವಿಸಿದೆ. ದಟ್ಟ ಹೊಗೆ ಒಳಗೆ ಸಿಲುಕಿದ್ದ ನಾಲ್ವರು ಕಾರ್ಮಿಕರಲ್ಲಿ ಇಬ್ಬರು ಮೃತಪಟ್ಟಿದ್ದು, ರಕ್ಷಿಸಲಾಗದ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಈ ದುರಂತಗಳಲ್ಲಿ ಕೆಲವರು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದ್ದು ಶೋಧ ನಡೆಯುತ್ತಿದೆ. ಕಾರ್ಬನ್ ಮೊನೊಕ್ಸೈಡ್‍ನ ವಿಪರೀತ ಸಾಂದ್ರತೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತುರ್ತು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin