ಭಾರತಕ್ಕೆ ಎಫ್-16 ಮಾರಾಟ ಮಾಡುವಂತೆ ಟ್ರಂಪ್’ಗೆ ಸೆನೆಟರ್‍ಗಳ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

F126

ವಾಷಿಂಗ್ಟನ್, ಮಾ.25– ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಎಫ್-16 ಫೈಟರ್ ಜೆಟ್ಸ್‍ನ್ನು ಭಾರತಕ್ಕೆ ಮಾರಾಟ ಮಾಡುವಂತೆ ಸೆನೆಟ್‍ನ ಇಬ್ಬರು ಸದಸ್ಯರು ಟ್ರಂಪ್ ಆಡಳಿತವನ್ನು ಒತ್ತಾಯಿಸಿದ್ದಾರೆ.  ಭಾರತದ ಭದ್ರತೆಗೆ ಸಂಬಂಧಿಸಿದಂತೆ ಉದ್ಭವಿಸುವ ಬೆದರಿಕೆ, ಆತಂಕಗಳನ್ನು ಮೆಟ್ಟಿ ನಿಲ್ಲುವ ಹಾಗೂ ಚೀನಾ ಮಿಲಿಟರಿ ಶಕ್ತಿಗೆ ಪರ್ಯಾಯವಾಗಿ ಭಾರತದಲ್ಲಿಯೂ ಕೂಡ ಸೇನಾ ಸಾಮಥ್ರ್ಯ ಬಲಪಡಿಸಿ ಈ ಎರಡೂ ರಾಷ್ಟ್ರಗಳ ನಡುವೆ ಶಾಂತಿ ಕಾಪಾಡಲು ಎಫ್-16 ಯುದ್ದ ವಿಮಾನಗಳು ನೀಡಬೇಕೆಂದು ಸೆನೆಟ್ ಸದಸ್ಯರು ಪತ್ರದಲ್ಲಿ ತಿಳಿಸಿದ್ದಾರೆ.

ವರ್ಜಿನೀಯದ ಸದಸ್ಯ ಮಾರ್ಕ್‍ವಾರ್ನರ್ ಮತ್ತು ಟೆಕ್ಸಾದ ಸದಸ್ಯ ಜಾನ್ ಕಾರ್ನಿನ್ ಇವರಿಬ್ಬರೂ ಜಂಟಿ ಪತ್ರವನ್ನು ಆಮೆರಿಕ ರಕ್ಷಣಾ ಕಾರ್ಯದರ್ಶಿ ಜೆಮ್ಸ್ ಮಟ್ಟೀಸ್‍ಗೆ ನೀಡಿದ್ದಾರೆ. ಸೈಟೆಕ್ ಜೆಟ್ಸ್‍ನ ಸಂಪೂರ್ಣ ಲಾಭ ಪಡೆದುಕೊಳ್ಳಲು ಟ್ರಂಪ್ ಆಡಳಿತ ಭಾರತಗೊಂದಿಗೆ ಚರ್ಚಿಸುವ ಅಗತ್ಯವಿದೆ ಎಂದು ಸದನದಲ್ಲಿ ರಾಜ್ಯ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‍ಸನ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin