ಬಾಂಗ್ಲಾದೇಶ : ಮಿನಿ ವ್ಯಾನ್‍ಗೆ ಟ್ರಕ್ ಡಿಕ್ಕಿ ಹೊಡೆದು 12 ಕೂಲಿಕಾರ್ಮಿಕರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

12--Killed--01

ಢಾಕಾ,ಮಾ.26-ಮಿನಿ ವ್ಯಾನ್‍ಗೆ ಟ್ರಕ್ ಡಿಕ್ಕಿ ಹೊಡೆದು 12 ಕಾರ್ಮಿಕರು ಸಾವನ್ನಪ್ಪಿರುವ ಭೀಕರ ಘಟನೆ ಬಾಂಗ್ಲಾದೇಶದ ಚೌದಾಂಗ ಜಿಲ್ಲೆಯ ಢಾಕಾ-ದಕ್ಷಿಣ ಕೌಲ್ನಾ ಹೆದ್ದಾರಿಯಲ್ಲಿ ನಡೆದಿದೆ. ಮಿನಿವ್ಯಾನ್‍ನಲ್ಲಿ 18 ಕೂಲಿಕಾರ್ಮಿಕರು ದಿನಗೂಲಿಗಾಗಿ ಹೊರಟಿದ್ದಾಗ ಎದುರಿನಿಂದ ಬಂದ ಟ್ರಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದ್ದು, 18 ಮಂದಿಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಉಳಿದ 6 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರೆಲ್ಲರೂ ಧರ್ಮುದ ಉಪಝಿಲ್ಲದವರು ಎಂದು ಹೇಳಲಾಗಿದೆ.

ಡಿಕ್ಕಿ ರಭಸಕ್ಕೆ ದೇಹಗಳು ಚೆಲ್ಲಾಪಿಲ್ಲಿಯಾಗಿವೆ. ಮೃತರ ಗುರುತು ಇನ್ನು ಪತ್ತೆಯಾಗಿಲ್ಲ. ಇವರೆಲ್ಲರು ದಿನಗೂಲಿ ಕಾರ್ಮಿಕರಾಗಿಬಹುದೆಂದು ಪೊಲೀಸರು ತಿಳಿಸಿದ್ದಾರೆ. ಪ್ರತಿ ವರ್ಷ ಬಾಂಗ್ಲಾದಲ್ಲಿ 100ಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದು, ಚಾಲಕರ ನಿರ್ಲಕ್ಷ್ಯ ಮತ್ತು ಹದಗೆಟ್ಟ ರಸ್ತೆಯಿಂದಾಗಿ ಇಂತಹ ಅಪಘಾತಗಳು ಸಂಭವಿಸುತ್ತಲೇ ಇವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin