ಬಾಲಕಿ ಮೇಲೆ ಶಿಕ್ಷಕರೂ ಸೇರಿದಂತೆ 8 ಮಂದಿಯಿಂದ ಗ್ಯಾಂಗ್‍ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

Gang-Rape

ಬಿಕಾನೇರ್(ರಾಜಸ್ತಾನ), ಮಾ.26-ಶಾಲಾ ಬಾಲಕಿಯೊಬ್ಬಳನ್ನು ಆಕೆಯ ಶಿಕ್ಷಕರೂ ಸೇರಿದಂತೆ ಎಂಟು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಹೀನಾಯ ಕೃತ್ಯವು ರಾಜಸ್ತಾನದ ಬಿಕಾನೇರ್ ಜಿಲ್ಲೆಯಲ್ಲಿ ನಡೆದಿದೆ. 13 ವರ್ಷದ ವಿದ್ಯಾರ್ಥಿನಿ ಮೇಲೆ ಒಂದು ವರ್ಷ ಹಿಂದೆ ನಡೆದ ಬಾಲಕಿ ತೀವ್ರ ಅಸ್ವಸ್ಥಳಾದ ಬಳಿಕ ಈಗ ಬೆಳಕಿಗೆ ಬಂದಿದೆ.   ಗ್ಯಾಂಗ್ ರೇಪ್‍ಗೆ ಒಳಗಾದ ಬಾಲಕಿ ಈ ರಕ್ತ ಕ್ಯಾನ್ಸರ್‍ನಿಂದ ನರಳುತ್ತಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಕೆಯ ಪೋಷಕರು ಎಫ್‍ಐಆರ್ ದಾಖಲಿಸಿದ್ದಾರೆ.   ಆರೋಪಿಗಳು ಸಾಮೂಹಿಕ ಅತ್ಯಾಚಾರದ ದೃಶ್ಯಗಳನ್ನು ಮೊಬೈಲ್ ಫೋನ್‍ಗಳಲ್ಲಿ ಸೆರೆಹಿಡಿದು ಬಾಲಕಿಗೆ ಮತ್ತು ಆಕೆಯ ಪೋಷಕರಿಗೆ ಬ್ಲಾಕ್‍ಮೇಲ್ ಮಾಡಿದ್ದರು.

ಎಂಟು ಮಂದಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು. ಇವರಲ್ಲಿ ತಾನು ಓದುತ್ತಿದ್ದ ಶಾಲೆಯ ಶಿಕ್ಷಕರೂ ಇದ್ದರು. ಕೃತ್ಯ ಎಸಗಿ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಬಾಲಕಿ ತಿಳಿಸಿದ್ಧಾಳೆ.   ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈದ್ಯಕೀಯ ಸಮಿತಿ ರಚಿಸಲಾಗಿದೆ ಎಂದು ಹೇಳಿಕೆ ನೀಡಿರುವ ರಾಜಸ್ತಾನ ಗೃಹ ಸಚಿವ ಗುಲಾಬ್ ಸಿಂಗ್ ಕಟಾರಿಯಾ, ವರದಿ ಬಂದ ಬಳಿಕ ತಪ್ಪಿಸತ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin