ಬ್ಯಾಟ್ಸ್’ಮೆನ್ ರೂಪದಲ್ಲಿ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವೆ

ಈ ಸುದ್ದಿಯನ್ನು ಶೇರ್ ಮಾಡಿ

Dinesh-Kartik

ಕೋಲ್ಕತ್ತಾ , ಮಾ. 26- ಪ್ರಸಕ್ತ ರಣಜಿ ಹಾಗೂ ವಿಜಯ್‍ಹಜಾರೆ ಸರಣಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿರುವ ಬಂಗಾಳದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ಮತ್ತೆ ಭಾರತ ತಂಡದ ಪರ ಆಡುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಾನು ಈ ಹಿಂದೆ ವಿಕೆಟ್ ಕೀಪರ್ ರೂಪದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದೆ ಆದರೆ ಈಗ ಆ ಸ್ಥಾನದಲ್ಲಿ ವೃದ್ಧಿಮಾನ್ ಸಾಹ (ಟೆಸ್ಟ್ ) ಹಾಗೂ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ( ಏಕದಿನ) ಉತ್ತಮ ಪ್ರದರ್ಶನ ತೋರುತ್ತಿರುವುದರಿಂದ ನಾನು ವಿಕೆಟ್ ಕೀಪರ್ ರೂಪದಲ್ಲಿ ಸ್ಥಾನ ಪಡೆಯುವುದು ಅನುಮಾನ.

ಆದರೆ ಒಬ್ಬ ಉತ್ತಮ ಬ್ಯಾಟ್ಸ್‍ಮನ್ ರೂಪದಲ್ಲಿ ತಂಡವನ್ನು ಪ್ರತಿನಿಧಿಸುತ್ತೇನೆ ಎಂದು ಕಾರ್ತಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.   ರಣಜಿ ಪಂದ್ಯದಲ್ಲಿ 10 ಪಂದ್ಯಗಳಿಂದ 704 ಹಾಗೂ ವಿಜಯ್‍ಹಜಾರೆ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶತಕ (114) ಸೇರಿದಂತೆ 607 ರನ್ ಹಾಗೂ ದುಲೀಪ್ ಟ್ರೋಫಿಯಲ್ಲಿ 3 ಪಂದ್ಯಗಳಿಂದ 211 ರನ್ ಗಳಿಸಿರುವುದನ್ನು ಬಿಬಿಸಿಐ ಪರಿಗಣಿಸಿದರೆ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತೇನೆ ಎಂದು ದಿನೇಶ್ ಕಾರ್ತಿಕ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin