ಶ್ರೀನಿವಾಸ ಪ್ರಸಾದ್ ಗೆಲುವಿನ ಮೇಲೆ ಬಿಜೆಪಿ ಭವಿಷ್ಯ ನಿಂತಿದೆ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ನಂಜನಗೂಡು, ಮಾ.26- 40 ವರ್ಷಗಳ ಸುಧೀರ್ಘ ಅನುಭವವಿರುವ, ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ಹಿರಿಯ ಸಜ್ಜನ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ರವರ ಗೆಲುವಿನ ಮೇಲೆ ಬಿಜೆಪಿಯ ಭವಿಷ್ಯ ನಿಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ತಾಲೂಕಿನ ದೇಬೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಪರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಸಾದ್ ರವರನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ನಾವೇ ಒತ್ತಡ ಹೇರಿದ್ದು ಅವರು ಸ್ಪರ್ಧಿಸುತ್ತೇನೆಂಬ ಇಂಗಿತ ವ್ಯಕ್ತಪಡಿಸಿರಲಿಲ್ಲ ಅವರನ್ನು ಗೆಲ್ಲಿಸಿ ರಾಜ್ಯಾದ್ಯಂತ ಬಿಜೆಪಿ ದಲಿತ ಸಮುದಾಯದ ಪರವಾಗಿದೆ ಎಂಬ ಸಂದೇಶವನ್ನು ಕಳುಹಿಸಬೇಕಾಗಿದೆ. ರಾಜ್ಯದ 224 ಕ್ಷೇತ್ರಗಳ ಭವಿಷ್ಯ ಇದರಲ್ಲಿ ಅಡಗಿದೆ ಎಂದರು.

ಹಣದ ಬಲದಿಂದ ಜಾತಿಯ ವಿಷಬೀಜ ಬಿತ್ತಿ ಗೆಲ್ಲುತ್ತೇನೆಂಬ ಸಿದ್ದರಾಮಯ್ಯರವರು ಹಿಟ್ಲರ್‍ನ ನೀತಿಯನ್ನು ಅನುಸರಿಸುತ್ತಿದ್ದಾರೆ ಅದು ಸಾದ್ಯವಾಗುವುದಿಲ್ಲ, ಸಿದ್ದರಾಮಯ್ಯ ಕಾಲಿಟ್ಟ ಗಳಿಗೆಯಿಂದ ರಾಜ್ಯದಲ್ಲಿ ಭೀಕರ ಬರಗಾಲವಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ ರೈತರು ಸಾಲ ಕಟ್ಟಲು ಸಾಧ್ಯವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕೆ ಮಾಡಿದರು. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಜೆಡಿಎಸ್‍ನಿಂದ ಕರೆದುಕೊಂಡು ಬರಲಿಲ್ಲ ಅವರನ್ನು ಹಿಡಿದುಕೊಂಡು ಬಂದರು ಅವರ ಸ್ಪರ್ಧೆ ನೆಪ ಮಾತ್ರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳೇ ಮಾಲೀಕರು ಜನರೆ ಅವರಿಗೆ ತಕ್ಕ ಪಾಠ ಕಲಿಸಲು ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಸಂಸದ ಆರ್.ದೃವನಾರಾಯಣ್ ಶ್ರೀನಿವಾಸ ಪ್ರಸಾದ್ ಬೆಳೆಸಿದ ಒಬ್ಬ ಬಚ್ಚಾ ಅವರು ಮಾತನಾಡುವಾಗ ಇತಿಮಿತಿಯಿಂದ ಮಾತನಾಡಬೇಕು ಮೈಕ್ ಸಿಕ್ಕಿತೆಂದು ಅವರ ವಿರುದ್ದ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ವಾಗ್ದಾಳಿ ಮಾಡಿದರು.  ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಬಿ,ಎಸ್.ಯಡಿಯೂರಪ್ಪನವರು ಮತ್ತು ನಾನು ಒಂದಾದರೇ ಏನಾಗುತ್ತೇ ಎಂಬುವುದು ಈಗಾಗಲೇ ಸಿದ್ದರಾಮಯ್ಯನವರಿಗೆ ಗೊತ್ತಾಗಿದೆ. ಅವರಿಗೆ ಅಧಿಕಾರ, ದುರಾಹಂಕಾರದ ಮದ ಏರಿದೆ ಆ ಮದವನ್ನು ಮತದಾರರು ನೀವೆ ಇಳಿಸಬೇಕು. ಗೆಲ್ಲುವುದು ನಾವೇ ಎಂದು ಆತ್ಮವಿಶ್ವಾಸದಿಂದ ನುಡಿದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ರುದ್ರಪ್ಪ ಲಮ್ಮಾಣಿ, ರೇವು ನಾಯಕ್ ಬೆಳಮುಗಿ, ಲಂಡನ್ ಮಾಜಿ ಮೇಯರ್ ನೀರಜ್ ಪಾಟೀಲ್, ಚುನಾವಣಾ ಉಸ್ತುವಾರಿ ರಾಮರೆಡ್ಡಿ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷರಾದ ಎಸ್.ಮಹದೇವಯ್ಯ, ಆಶೋಕ್, ಕೆ.ಕೆ,ಜಯದೇವ್, ಪ್ರಧಾನ ಕಾರ್ಯಧರ್ಶಿ ಪಣೀಶ್, ರಾಜ್ಯ ಎಸ್‍ಸಿ ಅಧ್ಯಕ್ಷ ಡಿ.ಎಸ್.ವೀರಯ್ಯ, ಮುಡಾ ಮಾಜಿ ಅಧ್ಯಕ್ಷರಾದ ಕೆ.ಆರ್.ಮೋಹನ್‍ಕುಮಾರ್ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin